ಕೋಲ್ಕತ್ತಾದಲ್ಲಿ ಆರ್`ಸಿಬಿ-ಕೆಕೆಆರ್ ಬಿಗ್ ಫೈಟ್: ಬೆಂಗಳೂರಿಗೆ ಕನ್ನಡಿಗರ ಸವಾಲ್

ಭಾನುವಾರ, 23 ಏಪ್ರಿಲ್ 2017 (12:53 IST)
ಐಪಿಎಲ್ ಮಹಾ ಸಂಗ್ರಾಮಲ್ಲಿಂದು ಎರಡು ಪಂದ್ಯಗಳು ನಡೆಯಲಿವೆ. ರಾಜ್ ಕೋಟ್`ನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಗುಜರಾತ್ ಲಯನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ರಾತ್ರಿ 8 ಗಂಟೆಗೆ ಆರಂಭವಾಗಲಿರುವ 2ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಸೆಣೆಸಲಿವೆ..
 

ಐಪಿಎಲ್ 2017ರಲ್ಲಿ ಉಭಯ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ. ಇದುವರೆಗೆ ಟೂರ್ನಿಯಲ್ಲಿ 6 ಪಂದ್ಯಗಳನ್ನಾಡಿರುವ ಗಂಭೀರ್ ಪಡೆ 4ರಲ್ಲಿ ಗೆದ್ದಿದೆ. ಕೊಹ್ಲಿ ಪಡೆ 6 ಪಂದ್ಯಗಳನ್ನಾಡಿ 2ರಲ್ಲಿ ಪ್ರಯಾಸದ ಗೆಲುವು ಕಂಡಿದೆ.
ಆರ್`ಸಿಬಿಗೆ ಗೇಲ್ ಬಲ: ಡಿವಿಲಿಯರ್ಸ್ ಅನುಪಸ್ಥಿತಿಯಲ್ಲಿ ಕ್ರಿಸ್ ಗೇಲ್ ಫಾರ್ಮ್`ಗೆ ಮರಳಿರುವುದು ತಂಡಕ್ಕೆ ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ. ಗುಜರಾತ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ್ದ ಗೇಲ್ ಐಪಿಎಲ್ ತಂಡಗಳಿಗೆ ಭಯ ಹುಟ್ಟಿಸಿದ್ದಾರೆ. ಕೊಹ್ಲಿ ಸಹ ಫಾರ್ಮ್`ನಲ್ಲಿದ್ದು, ಕೇದಾರ್ ಜಾಧವ್, ಟ್ರ್ಯಾವಿಸ್ ಹೆಡ್ ಸಹ ಲಯಕ್ಕೆ ಮರಳಿದ್ದಾರೆ. ಶೇನ್ ವ್ಯಾಟ್ಸನ್ ಬ್ಯಾಟಿಂಗ್ ವಿಫಲವಾಗುತ್ತಿರುವುದು ಕೊಹ್ಲಿಗೆ ತಲೆನೋವಾಗಿದೆ.

ಆರ್`ಸಿಬಿ ಬೌಲಿಂಗ್ ಪಡೆ ಸುಧಾರಿಸಿದೆ. ಭರವಸೆಯ ಬೌಲರ್ ಯಜುವೇಂದ್ರ ಚಾಹಲ್ ಮಹತ್ವದ ಸಂದರ್ಭದಲ್ಲಿ ವಿಕೆಟ್ ಕಿತ್ತು ತಮಡಕ್ಕೆ ನೆರವಾಗುತ್ತಿದ್ದಾರೆ. ಎಸ್. ಅರವಿಂದ ಬೌಲಿಂಗ್ ಲಯ ಕಂಡುಕೊಂಡಿದ್ದಾರೆ. ಮಿಲ್ನೆ ದುಬಾರಿಯಾಗುತ್ತಿದ್ದು, ಬದ್ರಿ ಬಲ ತುಂಬಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಕನ್ನಡಿಗರಿಗೆ ಕನ್ನಡಿಗರ ಸವಾಲ್: ಕೋಲ್ಕತ್ತಾ ತಂಡದಲ್ಲಿ ಕನ್ನಡಿಗರಾದ ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ ಅತ್ಯುತ್ತಮ ಫಾರ್ಮ್`ನಲ್ಲಿದ್ದು ಆರ್ಸಿಬಿಗೆ ಸವಾಲೆಸೆಯಲಿದ್ದಾರೆ. ಇವರನ್ನ ಕಟ್ಟಿಹಾಕುವುದು ಕೊಹ್ಲಿ ಪಡೆಗೆ ಹರಸಾಹಸವೇ ಸರಿ.
ಎರಡೂ ತಂಡಗಲೂ ಬಲಿಷ್ಠವಾಗಿಯೇ ಇದ್ದು, ಈಡನ್ ಗಾರ್ಡನ್`ನಲ್ಲಿ ಹೈ ವೋಲ್ಟೇಜ್ ಮ್ಯಾಚ್ ನಡೆಯಲಿದೆ, ಆರ್ಸಿಬಿಗೆ ಗೆಲುವು ಅನಿವಾರ್ಯವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ