ಲ್ಯಾಪ್ ಟಾಪ್ ಮುರಿದ ಶಿಖರ್ ಧವನ್ ಶಾಟ್! ಲಕ್ಷ್ಮಣ್ ಕೆಂಡಾಮಂಡಲ!

ಭಾನುವಾರ, 16 ಏಪ್ರಿಲ್ 2017 (09:45 IST)
ನವದೆಹಲಿ: ಸಾಮಾನ್ಯವಾಗಿ ವಿವಿಎಸ್ ಲಕ್ಷ್ಮಣ್ ಕೋಪಗೊಳ್ಳುವುದು ಕಡಿಮೆ. ಆದರೆ ಭಾನುವಾರ ನಡೆದ ಕೋಲ್ಕೊತ್ತಾ ವಿರುದ್ಧದ ಪಂದ್ಯದಲ್ಲಿ ಲಕ್ಷ್ಮಣ್ ಕೋಪ ನೆತ್ತಿಗೇರಿತ್ತು. ಅದಕ್ಕೆ ಕಾರಣ ಒಡೆದ ಲಾಪ್ ಟಾಪ್.


 
ಹೈದರಾಬಾದ್ ತಂಡದ ಮೆಂಟರ್ ಆಗಿರುವ ಲಕ್ಷ್ಣಣ್ ಗೆ ಕೋಪ ಬಂದಿದ್ದು ಶಿಖರ್ ಧವನ್ ಹೊಡೆದ ಆ ಹೊಡೆತ. ಧವನ್ ಏನೋ ಎಂದಿನಂತೆ ತಮ್ಮ ಮೆಚ್ಚಿನ ಕಟ್ ಶಾಟ್ ಹೊಡೆದರು. ಆದರೆ ಅದು ಬೌಂಡರಿ ಗೆರೆ ಬಳಿ ಕೂತಿದ್ದ ಹೈದರಾಬಾದ್ ತಂಡದ ತಾಂತ್ರಿಕ ವಿಮರ್ಶಕ ತಂಡದ ಲ್ಯಾಪ್ ಟಾಪ್ ಗೆ ಬಡಿದು ಅದು ಹಾಳಾಯಿತು.

 
ಇದು ಲಕ್ಷ್ಮಣ್ ಕೋಪಕ್ಕೆ ಕಾರಣವಾಯಿತು. ಸರಿಯಾಗಿ ಲ್ಯಾಪ್ ಟಾಪ್ ರಕ್ಷಿಸಿಕೊಳ್ಳದ ಅನಲಿಸ್ಟ್ ವಿರದ್ಧ ಕೆಂಡಾಮಂಡಲರಾದರು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ