ಬೆಂಗಳೂರು: ವಿರಾಟ್ ಕೊಹ್ಲಿ ಬರುತ್ತಾರೆ. ಬಂದ ಮೇಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದ್ದು ಬರುತ್ತದೆ ಎಂಬ ನಿರೀಕ್ಷೆಗಳೆಲ್ಲಾ ಸುಳ್ಳಾಗಿದೆ. ಕೊಹ್ಲಿಯೇನೋ ಎದ್ದು ಬಂದರು. ಆದರೆ ಬೆಂಗಳೂರು ಹಾಗೇ ಇತ್ತು.
ಐಪಿಎಲ್ 10 ರ ನಿನ್ನೆ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡದ ವಿರುದ್ಧ ಮುಂಬೈ ರೋಚಕವಾಗಿ ಗೆದ್ದುಕೊಂಡಿತು. ಗಾಯದಿಂದ ಚೇತರಿಸಿಕೊಂಡು ನಿನ್ನೆಯಷ್ಟೇ ಕಣಕ್ಕಿಳಿದ ಕೊಹ್ಲಿ ಭರ್ಜರಿಯಾಗಿ ತಮ್ಮ ಪುನರಾಗಮನ ಸಾರಿದರು. ಅವರು 47 ಬಾಲ್ ಗಳಲ್ಲಿ 62 ರನ್ ಗಳಿಸಿ ತಂಡದ ಮೊತ್ತವನ್ನು 142 ರವರೆಗೆ ವಿಸ್ತರಿಸಿದರು.
ಆದರೆ ಕಡಿಮೆ ಮೊತ್ತ ಬೆನ್ನತ್ತಿದ ಮುಂಬೈ ಒಂದು ಹಂತದಲ್ಲಿ ಕೇವಲ 33 ರನ್ ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಸಹೋದರ ಕೃನಾಲ್ ಪಾಂಡ್ಯ ಮತ್ತು 40 ಬಾಲ್ ಗಳಲ್ಲಿ 70 ರನ್ ಚಚ್ಚಿದ ಕಿರಾನ್ ಪೊಲಾರ್ಡ್ ಆಸರೆಯಾದರು. ಹೀಗಾಗಿ ಮುಂಬೈ ಸುಲಭವಾಗಿ ಗುರಿಮುಟ್ಟಿತು.
ಇನ್ನೊಂದು ಪಂದ್ಯದಲ್ಲಿ ಗುಜರಾತ್ ಲಯನ್ಸ್ ತಂಡ ರೈಸಿಂಗ್ ಪುಣೆ ವಿರುದ್ಧ ಆಡಿ ಟೂರ್ನಿಯ ಮೊದಲ ಗೆಲುವು ದಾಖಲಿಸಿತು. ಗೆಲುವಿಗೆ 171 ರನ್ ಗಳ ಗುರಿ ಬೆನ್ನತ್ತಿದ ಲಯನ್ಸ್ ಮೂರು ವಿಕೆಟ್ ಕಳೆದುಕೊಂಡು ವಿಜಯಿಯಾಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ