ಪುಣೆ: ಸದ್ಯ ಐಪಿಎಲ್ ಗೆ ತಯಾರಾಗುತ್ತಿರುವ ಧೋನಿಗೆ ಕ್ರಿಕೆಟ್ ನಾಯ
ಕತ್ವದ ಒತ್ತಡವಿಲ್ಲ. ಹೀಗಾಗಿ ಅವರು ಒಂದು ದಿನದ ಮಟ್ಟಿಗೆ ಆಯಿಲ್ ಕಂಪನಿಯೊಂದರ ಕ್ಯಾಪ್ಟನ್ ಆದರು!
ಅಂದರೆ ತಮ್ಮ ಸ್ನೇಹಿತರೊಬ್ಬರ ಗಲ್ಫ್ ಆಯಿಲ್ ಇಂಡಿಯಾ ಕಂಪನಿಗೆ ಒಂದು ದಿನದ ಮಟ್ಟಿಗೆ ಸಿಇಒ ಆಗಿ ನೌಕರರಲ್ಲಿ ಅಚ್ಚರಿ ಮೂಡಿಸಿದರು. ಸಾಮಾನ್ಯವಾಗಿ ಕ್ರಿಕೆಟ್ ಮೈದಾನದಲ್ಲಿ ಡಾನ್ ಆಗಿ ಮೆರೆಯುವ ಧೋನಿ ಪಾಲಿಗೆ ಇದು ಹೊಸ ಜವಾಬ್ದಾರಿಯಾಗಿತ್ತು.
ಆದರೆ ಕೇವಲ ಹೆಸರಿಗಷ್ಟೇ ಸಿಇಒ ಆಗಿರದೆ, ಉದ್ಯೋಗಿಗಳೊಂದಿಗೆ ಮೀಟಿಂಗ್ ನಡೆಸಿದರು. ಅಲ್ಲದೆ, ಕೆಲವು ನಿರ್ಧಾರಗಳನ್ನೂ ಕೈಗೊಂಡರು ಎಂದು ಅವರ ಸ್ನೇಹಿತ ಅರುಣ್ ಪಾಂಡೆ ಹೇಳಿದ್ದಾರೆ. ಹಲವು ದಿನಗಳಿಂದ ಇಂತಹದ್ದೊಂದು ಗಳಿಗೆಗಾಗಿ ಧೋನಿ ಮತ್ತು ಕಂಪನಿ ಯೋಜನೆ ರೂಪಿಸಿತ್ತಂತೆ. ಕೊನೆಗೂ ಸೂಟು ಬೂಟು ಹಾಕಿಕೊಂಡು ಸಿಇಒ ಚೇರ್ ಮೇಲೆ ಕುಳಿತುಕೊಳ್ಳುವ ಧೋನಿ ಹಾಗೂ ಉದ್ಯೋಗಿಗಳ ಕನಸು ನನಸಾಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ