ಐಪಿಎಲ್: ಡೆಲ್ಲಿ ತಂಡ ಆಡುವುದನ್ನು ನೋಡಲು ಅಭಿಮಾನಿಗಳಿಗೆ ನೋ ಎಂಟ್ರಿ!
ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡಾ ಎರಡು ಅಭ್ಯಾಸ ಪಂದ್ಯ ಆಡಿದೆ. ಆದರೆ ಡೆಲ್ಲಿ ಅಭಿಮಾನಿಗಳಿಗೆ ಈ ಅಭ್ಯಾಸ ಪಂದ್ಯ ನೋಡಲು ಅವಕಾಶ ನೀಡಲಾಗಿಲ್ಲ. ಕಾರಣ ಭದ್ರತೆ! ತಮ್ಮ ನೆಚ್ಚಿನ ತಾರೆಯನ್ನು ನೋಡಲು ಬಂದ ಅಭಿಮಾನಿಗಳು ಮೈದಾನದ ಹೊರಗೇ ಕಾಯುವಂತಹ ಪರಿಸ್ಥಿತಿ ಎದುರಾಯಿತು. ಭದ್ರತಾ ಕಾರಣಗಳಿಂದ ಅಭಿಮಾನಿಗಳನ್ನು ಒಳಗೆ ಬಿಡದೇ ಇದ್ದಿದ್ದು, ಡೆಲ್ಲಿ ತಂಡಕ್ಕೂ, ಅಭಿಮಾನಿಗಳಿಗೂ ನಿರಾಶೆ ಉಂಟುಮಾಡಿದೆ.