ಐಪಿಎಲ್: ರಾಜಸ್ಥಾನ್ ಚೆನ್ನೈ ಪಂದ್ಯದಲ್ಲಿ ಮತ್ತೆ ನೋ ಬಾಲ್ ಎಡವಟ್ಟು

ಶುಕ್ರವಾರ, 12 ಏಪ್ರಿಲ್ 2019 (08:37 IST)
ಜೈಪುರ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಂದು ಪಂದ್ಯವನ್ನು ಅಂಪಾಯರ್ ನ ನೋ ಬಾಲ್ ಪ್ರಮಾದದಿಂದ ಸೋತಿದ್ದು ನಿಮಗೆ ನೆನಪಿರಬಹುದು. ಇದೀಗ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಅಂತಹದ್ದೇ ಪ್ರಮಾದ ಎದುರಿಸುವ ಪ್ರಸಂಗ ಎದುರಾಗಿದೆ.


ನಿನ್ನೆ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಗೆಲುವಿನ ಸಮೀಪವಿದ್ದಾಗ ಈ ಘಟನೆ ನಡೆದಿದೆ. ಗೆಲುವಿಗೆ 8 ರನ್ ಅಗತ್ಯವಿದ್ದಾಗ ಬ್ಯಾಟ್ಸ್ ಮನ್ ಸ್ಯಾಂಟ್ನರ್ ಸೊಂಟದ ಎತ್ತರಕ್ಕೆ ಬಂದ ಬಾಲ್ ನ್ನು ಹೊಡೆದು ಎರಡು ರನ್ ಗಳಿಸಿದರು. ಈ ಬಾಲ್ ನ್ನು ಅಂಪಾಯರ್ ಉಲ್ಲಾಸ್ ಘಂಡೆ ನೋ ಬಾಲ್ಎಂದು ಘೋಷಿಸಿದರು.

ಆದರೆ ಇನ್ನೊಬ್ಬ ಫೀಲ್ಡ್ ಅಂಪಾಯರ್ ಇದನ್ನು ನಿರಾಕರಿಸಿದರು. ಬ್ಯಾಟ್ಸ್ ಮನ್ ಗಳಿಬ್ಬರೂ ಅಂಪಾಯರ್ ನೋ ಬಾಲ್ ನಿರಾಕರಿಸಿದ್ದಕ್ಕೆ ಪ್ರತಿಭಟಿಸಿದರೂ ಅಂಪಾಯರ್ ಗಳು ಕೇಳಲಿಲ್ಲ. ಡಗ್ ಔಟ್ ನಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದ ಧೋನಿ ಅಂಪಾಯರ್ ಗಳ ನಿಲುವಿನಿಂದ ಸಿಟ್ಟಿಗೆದ್ದು, ನೇರವಾಗಿ ಪಿಚ ಗೆ ಬಂದು ವಿವರಣೆ ಕೇಳಿದರು. ಆದರೆ ಧೋನಿ ವಾದಿಸಿದರೂ ಪ್ರಯೋಜನವಾಗಲಿಲ್ಲ. ಆದರೆ ಟವಿ ರಿಪ್ಲೇನಲ್ಲಿ ಇದು ನೋ ಬಾಲ್ ಆಗಿದ್ದಿದ್ದು ಸ್ಪಷ್ಟವಾಗಿತ್ತು.

ಹಾಗಿದ್ದರೂ ರಾಜಸ್ಥಾನ್ ನೀಡಿದ್ದ 151 ರನ್ ಗಳ ಬೆನ್ನತ್ತಿದ ಸಿಎಸ್ ಕೆ ಕೊನೆಯ ಬಾಲ್ ನಲ್ಲಿ 155 ರನ್ ಗಳಿಸುವ ಮೂಲಕ ರೋಚಕ ಜಯ ಸಾಧಿಸಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ