ಐಪಿಎಲ್: ಸ್ಯಾಮ್ ಕ್ಯುರೇನ್ ಹ್ಯಾಟ್ರಿಕ್ ಗೆ ಮುಗ್ಗರಿಸಿದ ಡೆಲ್ಲಿ ಕ್ಯಾಪಿಟಲ್ಸ್
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ನಿಗದಿತ 20 ಓವರ್ ಗಳಲ್ಲಿ 166 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಡೆಲ್ಲಿ ಒಂದು ಹಂತದಲ್ಲಿ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದರೂ ದಿಡೀರ್ ಕುಸಿತಕ್ಕೊಳಗಾಗಿ 152 ರನ್ ಗಳಿಗೆ ಆಲೌಟ್ ಆಯಿತು. ರಿಷಬ್ ಪಂತ್ 39 ರನ್ ಗಳಿಸಿದರೆ ಕಾಲಿನ್ ಇನ್ ಗ್ರಾಂ 38 ಮತ್ತು ಶಿಖರ್ ಧವನ್ 30 ರನ್ ಗಳಿಸಿದರು. ಹಾಗಿದ್ದರೂ ಗೆಲುವು ಸಾಧ್ಯವಾಗಲಿಲ್ಲ.