ಐಪಿಎಲ್: ಧೋನಿ ಮೇಲಿರುವ ಸ್ಥಳೀಯರ ಅಭಿಮಾನಿ ವಿರಾಟ್ ಕೊಹ್ಲಿ ಆರ್ ಸಿಬಿ ಮೇಲಿಲ್ಲ ಯಾಕೆ ಗೊತ್ತಾ?!
ಮಂಗಳವಾರ, 9 ಏಪ್ರಿಲ್ 2019 (09:21 IST)
ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಇಷ್ಟು ವರ್ಷ ಐಪಿಎಲ್ ಆಡಿದ ಬಳಿಕ ಧೋನಿ ತಮಿಳುನಾಡಿನ ಮನೆ ಮಗನಾಗಿಯೇ ಬದಲಾಗಿದ್ದಾರೆ. ಆದರೆ ಇಷ್ಟು ವರ್ಷದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿಯೇ ಆಡಿದರೂ ಕನ್ನಡಿಗರಿಗೆ ಹತ್ತಿರವಾಗಿಲ್ಲ ಯಾಕೆ?
ಚೆನ್ನೈ ತಂಡ ಕೂಡಿಕೊಂಡ ಧೋನಿ ಅಲ್ಲಿನವರಂತೇ ಭಾಷಾಭಿಮಾನ ಬೆಳೆಸಿಕೊಂಡರು. ಅಲ್ಲಿನ ಅಭಿಮಾನಿಗಳಿಂದಲೇ ತಲೈವಾ ಎನಿಸಿಕೊಂಡರು. ತಮ್ಮ ತಂಡದ ಬಗ್ಗೆ, ಅಭಿಮಾನಿಗಳ ಬಗ್ಗೆ ಪ್ರತ್ಯೇಕ ಪ್ರೀತಿ ಬೆಳೆಸಿಕೊಂಡರು. ಅವಕಾಶ ಸಿಕ್ಕಾಗಲೆಲ್ಲಾ ಧೋನಿ ತಮಿಳನ್ನೂ ಅಲ್ಪ ಸ್ವಲ್ಪ ಕಲಿತುಕೊಂಡರು. ಹೀಗಾಗಿಯೇ ಧೋನಿ ಅಲ್ಲಿ ಮನೆ ಮಗನಂತೆ ಪ್ರೀತಿ ಬೆಳೆಸಿಕೊಂಡರು.
ಆದರೆ ವಿರಾಟ್ ಕೊಹ್ಲಿ ಹಾಗಲ್ಲ. ಮೊದಲನೆಯದಾಗಿ ರಾಯಲ್ ಚಾಲೆಂಜರ್ಸ್ ನಲ್ಲಿ ಕನ್ನಡಿಗ ಆಟಗಾರರೇ ಇಲ್ಲ. ಕೋಚ್ ಕೂಡಾ ಇಲ್ಲಿನವರಲ್ಲ. ಅಲ್ಲದೆ ಕೊಹ್ಲಿ ಯಾವತ್ತೂ ಸ್ಥಳೀಯರಂತೆ ಇಲ್ಲಿನವರ ಅಭಿಮಾನಕ್ಕೆ ಒಗ್ಗಿಕೊಳ್ಳುವ ಮನೋಭಾವ ತೋರಲೇ ಇಲ್ಲ. ಗೆಲುವು ಮೊದಲೇ ಇಲ್ಲ.
ಬೇರೆಲ್ಲಾ ತಂಡಗಳಂತೆ ಸ್ಥಳೀಯ ಭಾಷೆ, ಸಂಸ್ಕೃತಿ, ನೃತ್ಯ ಇತ್ಯಾದಿ ಮನೋರಂಜನೆಗಳನ್ನು ಆರ್ ಸಿಬಿ ಆಟಗಾರರು ಪ್ರದರ್ಶಿಸುವುದೇ ಇಲ್ಲ. ಹೀಗಾಗಿಯೇ ತವರಿನ ಅಭಿಮಾನಿಗಳಿಗೆ ಆರ್ ಸಿಬಿ ಹತ್ತಿರವಾಗಲೇ ಇಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ