ಸರ್ದಾರ್ಜಿ ವೇಷ ತೊಟ್ಟ ವಿರಾಟ್ ಕೊಹ್ಲಿ! ಮುಂದಿನ ವರ್ಷ ಕಿಂಗ್ಸ್ ಇಲೆವೆನ್ ಪಂಜಾಬ್ ಸೇರ್ತಾರಾ?!

ಗುರುವಾರ, 18 ಏಪ್ರಿಲ್ 2019 (07:07 IST)
ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ವಿರಾಟ್ ಕೊಹ್ಲಿ ನಾಯಕರಾಗಿ ಯಶಸ್ಸು ಕಂಡಿದ್ದು ಅಷ್ಟರಲ್ಲೇ ಇದೆ. ಸತತ ಸೋಲಿನಿಂದ ಕಂಗೆಟ್ಟಿರುವ ಕೊಹ್ಲಿ ಇದೀಗ ಸರ್ದಾರ್ಜಿ ವೇಷ ಧರಿಸಿದ ಫೋಟೋ ಶೇರ್ ಮಾಡಿದ್ದು, ಹಲವು ಊಹಾಪೋಹಗಳಿಗೆ ಕಾರಣರಾಗಿದ್ದಾರೆ.


ಈ ಫೋಟೋ ಪ್ರಕಟಿಸಿದ ಒಂದೇ ಗಂಟೆಯೊಳಗೆ ಕೊಹ್ಲಿ 9 ಲಕ್ಷ ಲೈಕ್ಸ್ ಪಡೆದಿದ್ದಾರೆ. ಕೊಹ್ಲಿ ಪಂಜಾಬಿ ಉಡುಗೆಯ ಫೋಟೋವನ್ನು ನೋಡಿ ಅಭಿಮಾನಿಗಳು ತಮ್ಮ ತಮ್ಮ ಅಭಿಪ್ರಾಯ, ಅನಿಸಿಕೆ ಹೊರಹಾಕುತ್ತಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ವಿರಾಟ್ ರ ಸರ್ದಾಜಿ ತೊಡುಗೆ ನೋಡಿ ಅಭಿಮಾನಿಗಳು ‘ಏನು ಗುರೂ ಮುಂದಿನ ವರ್ಷ ಐಪಿಎಲ್ ಗೆ ಕಿಂಗ್ಸ್ ಇಲೆವೆನ್ ಪಂಜಾಬ್ ಗೆ ಬರುವ ಐಡಿಯಾ ಇದೆಯಾ’ ಎಂದು ಕಿಚಾಯಿಸುತ್ತಿದ್ದಾರೆ. ಹಾಗಿದ್ದರೂ ಕೊಹ್ಲಿ ಈ ಉಡುಗೆಯಲ್ಲಿ ಮತ್ತಷ್ಟು ಹ್ಯಾಂಡ್ಸಮ್ ಆಗಿ ಕಾಣಿಸುತ್ತಿರುವುದಂತೂ ಸುಳ್ಳಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ