ಕಳಪೆ ಪ್ರದರ್ಶನದ ಬೆನ್ನಲ್ಲೇ ಸಿಎಸ್ ಕೆಗೆ ಸುರೇಶ್ ರೈನಾ ಕಮ್ ಬ್ಯಾಕ್ ರೂಮರ್

ಭಾನುವಾರ, 27 ಸೆಪ್ಟಂಬರ್ 2020 (09:26 IST)
ದುಬೈ: ಐಪಿಎಲ್ 13 ರ ಮೂರು ಪಂದ್ಯಗಳ ಪೈಕಿ ಕಳೆದ ಎರಡು ಪಂದ್ಯಗಳಲ್ಲಿ ಸತತ ಸೋಲುಂಡ ಸಿಎಸ್ ಕೆ ಸುರೇಶ್ ರೈನಾ ವಾಪಸಾತಿಯಾಗಬೇಕು ಎಂದು ಅಭಿಮಾನಿಗಳ ಒತ್ತಾಯ ಹೆಚ್ಚಿದೆ. ಈ ಬಗ್ಗೆ ಸಿಎಸ್ ಕೆ ಸಿಇಒ ಪ್ರತಿಕ್ರಿಯೆ ನೀಡಿದ್ದಾರೆ.


ಬ್ಯಾಟಿಂಗ್ ವೈಫಲ್ಯ ಕಂಡಿರುವ ಸಿಎಸ್ ಕೆ ರೈನಾರಂತಹ ಪ್ರತಿಭಾವಂತ, ಅನುಭವಿ ಬ್ಯಾಟ್ಸ್ ಮನ್ ಅವಶ್ಯಕತೆ ಇದೆ. ಅವರು ಕಮ್ ಬ್ಯಾಕ್ ಮಾಡಲಿ ಎಂದು ಅಭಿಮಾನಿಗಳು ಒತ್ತಾಯಿಸಿದ್ದರು. ವೈಯಕ್ತಿಕ ಕಾರಣ ನೀಡಿ ಐಪಿಎಲ್ 13 ರಿಂದ ಹೊರಬಂದಿರುವ ರೈನಾ ಮರಳಿ ತಂಡವನ್ನು ಕೂಡಿಕೊಳ್ಳಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಸಿಎಸ್ ಕೆ ಸಿಇಒ ವಿಶ್ವನಾಥನ್ ‘ಸ್ವತಃ ರೈನಾ ಅವರೇ ಹೊರಹೋಗಿರುವ ಕಾರಣ ಅವರನ್ನು ವಾಪಸ್ ಕರೆಸಿಕೊಳ್ಳುವ ಪ್ರಶ್ನೆಯೇ ಇಲ್ಲ. ನಮ್ಮಲ್ಲಿ ಸಮರ್ಥ ಆಟಗಾರರಿದ್ದಾರೆ. ನಾವು ಮತ್ತೆ ಪುಟಿದೇಳುತ್ತೇವೆ ಎಂದು ಅಭಿಮಾನಿಗಳಿಗೆ ಭರವಸೆ ನೀಡಬಲ್ಲೆವು’ ಎಂದು ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ