ಸೋಲಿಗೆ ನಾನೇ ಕಾರಣನಾದೆ ಎಂದ ಕೊಹ್ಲಿಗೆ ಈಗ ದಂಡದ ಬರೆ

ಶುಕ್ರವಾರ, 25 ಸೆಪ್ಟಂಬರ್ 2020 (10:26 IST)
ದುಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಹೀನಾಯ ಸೋಲು ಕಂಡ ಬಳಿಕ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಸೋಲಿಗೆ ತಾವೇ ಕಾರಣ ಎಂದಿದ್ದಾರೆ. ಈ ಸೋಲಿನ ಜತೆಗೆ ನಿಧಾನಗತಿಯ ಓವರ್ ಎಸೆದ ಕಾರಣಕ್ಕೆ ಕೊಹ್ಲಿಗೆ ದಂಡದ ಬರೆಯೂ ಸಿಕ್ಕಿದೆ.


ನಾನು ನಾಯಕನಾಗಿ ಮುಂದಾಳತ್ವ ವಹಿಸಿ ತಂಡವನ್ನು ಮುನ್ನಡೆಸಬೇಕಿತ್ತು. ಆದರೆ ನಾನೇ ವಿಫಲನಾದೆ ಎಂದು ಕೊಹ್ಲಿ ಪಶ್ಚಾತ್ತಾಪ ಪಟ್ಟಿದ್ದಾರೆ. ಈ ಪಂದ್ಯದಲ್ಲಿ ಅವರು ಕೆಎಲ್ ರಾಹುಲ್ ಗೆ ಎರಡೆರಡು ಬಾರಿ ಜೀವದಾನ ನೀಡಿದ್ದರು. ಇನ್ನು ಈ ಪಂದ್ಯದಲ್ಲಿ ಆರ್ ಸಿಬಿ ನಿಧಾನಗತಿಯ ಓವರ್ ಮಾಡಿದ್ದಕ್ಕೆ ನಾಯಕ ಕೊಹ್ಲಿಗೆ 12 ಲಕ್ಷ ರೂ.ಗಳ ದಂಡ ಹಾಕಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ