ಐಪಿಎಲ್ 13: ರಾಯಲ್ ಬೆಂಗಳೂರಿಗೆ ಇಂದು ಮುಂಬೈ ಇಂಡಿಯನ್ಸ್ ಚಾಲೆಂಜ್

ಬುಧವಾರ, 28 ಅಕ್ಟೋಬರ್ 2020 (10:07 IST)
ದುಬೈ: ಐಪಿಎಲ್ 13 ರ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.


ಎರಡೂ ತಂಡಗಳು ಕಳೆದ ಪಂದ್ಯವನ್ನು ತಮ್ಮ ತಮ್ಮ ಎದುರಾಳಿ ವಿರುದ್ಧ ಸೋತಿದ್ದು, ಇಂದು ಗೆಲುವಿಗಾಗಿ ಕಾದಿದೆ. ಲೀಗ್ ಹಂತದ ಕೊನೆಯ ಪಂದ್ಯಗಳಲ್ಲಿ ಗೆಲ್ಲುವುದು ಮುಂದಿನ ಹಂತಕ್ಕೆ ತೇರ್ಗಡೆಯಾಗಲು ಅನಿವಾರ್ಯವಾಗಿದೆ. ಒಂದು ವೇಳೆ ಮುಂಬೈ ಗೆದ್ದರೆ ಅದರ ಪ್ಲೇ ಆಫ್ ಸ್ಥಾನ ಭದ್ರವಾಗಲಿದೆ. ಇತ್ತ ಆರ್ ಸಿಬಿ ಸೋತರೆ ಅಪಾಯ. ಹೀಗಾಗಿ ಎರಡೂ ತಂಡಗಳಿಗೆ ಇಂದು ಗೆಲುವು ಅನಿವಾರ್ಯವಾಗಿದೆ. ಇಂದಿನ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ