ಗೆದ್ದು ಬಂದ ಪತಿ ವಿರಾಟ್ ಕೊಹ್ಲಿಗೆ ಪತ್ನಿ ಅನುಷ್ಕಾ ಮುತ್ತಿನ ಉಡುಗೊರೆ

ಭಾನುವಾರ, 11 ಅಕ್ಟೋಬರ್ 2020 (09:44 IST)
ದುಬೈ: ಐಪಿಎಲ್ 13 ರ ನಿನ್ನೆಯ ಪಂದ್ಯದಲ್ಲಿ ಆರ್ ಸಿಬಿಗೆ ಗೆಲುವು ಕೊಡಿಸಿದ ನಾಯಕ ವಿರಾಟ್ ಕೊಹ್ಲಿಗೆ ಮೈದಾನದಲ್ಲೇ ಇದ್ದ ಪತ್ನಿ ಅನುಷ್ಕಾ ಶರ್ಮಾ ಮುತ್ತಿನ ಉಡುಗೊರೆ ನೀಡಿದ್ದಾರೆ.


ಕೊಹ್ಲಿ ನಿನ್ನೆ ಅತ್ಯುತ್ತಮ ಬ್ಯಾಟಿಂಗ್ ನಡೆಸಿ ತಂಡಕ್ಕೆ ಉತ್ತಮ ಮೊತ್ತ ದೊರಕಿಸಿ ಕೊಟ್ಟಿದ್ದರು. ಅವರ ಭರ್ಜರಿ ಬ್ಯಾಟಿಂಗ್ ನಿಂದ ಖುಷಿಯಾದ ಅನುಷ್ಕಾ ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವಿಸಿದರು. ಅಲ್ಲದೆ, ಕೊಹ್ಲಿ ಪೆವಿಲಿಯನ್ ಗೆ ಮರಳುವಾಗ ಫ್ಲೈಯಿಂಗ್ ಕಿಸ್ ಮೂಲಕ ಪತಿಗೆ ಅದ್ಧೂರಿ ಸ್ವಾಗತ ನೀಡಿದರು. ಇತ್ತ ವಿರಾಟ್ ಕೂಡಾ ಅರ್ಧ ಶತಕ ಸಿಡಿಸಿದ ಬಳಿಕ ತಮ್ಮ ಹೃದಯ ಮುಟ್ಟಿ ಅನುಷ್ಕಾ ಕಡೆಗೆ ಬ್ಯಾಟ್ ತೂರಿ ಸಂತಸ ವ್ಯಕ್ತಪಡಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ