ಸನ್ ರೈಸರ್ಸ್ ಹೈದರಾಬಾದ್ ಹಿರಿಯ ಎಡಗೈ ವೇಗಿ ಆಶಿಶ್ ನೆಹ್ರಾ ಅವರಿಗೆ ಮಂಡಿರಜ್ಜು ಗಾಯದಿಂದ ಐಪಿಎಲ್ ಲೀಗ್‌ನಿಂದ ಹೊರಬಿದ್ದಿದ್ದು, ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಭಾರೀ ಪೆಟ್ಟು ಬಿದ್ದಿದೆ. ಇದರಿಂದಾಗಿ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಅವರ ಭವಿಷ್ಯದ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ.
37 ವರ್ಷದ ನೆಹ್ರಾಗೆ ಯಾವುದೇ ಸೀಮಿತ ಓವರುಗಳ ಪಂದ್ಯಗಳಲ್ಲಿ ಆಡುವ ನಿರೀಕ್ಷೆಯಿಲ್ಲದೇ, ಅವರಿಗೆ ಕ್ರಿಕೆಟ್‌ನಲ್ಲಿ ಮುಂದುವರಿಯುವ ಉತ್ಸಾಹ ಉಳಿಯುತ್ತದೆಯೇ ಎಂದು ಕಾದುನೋಡಬೇಕು. ನೆಹ್ರಾ ಅವರಿಗೆ ಪೇಸ್ ಬೌಲಿಂಗ್ ಕುರಿತು ಆಳವಾದ ಜ್ಞಾನದಿಂದಾಗಿ ಮತ್ತು ಯುವ ಬೌಲರುಗಳ ಜತೆ ಸೌಹಾರ್ದ ಸಂಬಂಧದಿಂದಾಗಿ ಅವರನ್ನು ಬೌಲಿಂಗ್ ಕೋಚ್ ಹುದ್ದೆಗೆ ಆಯ್ಕೆ ಮಾಡುವ ಕುರಿತು ಚರ್ಚೆ ನಡೆದಿದೆ.