ಚೆನ್ನೈನತ್ತ ಪ್ರಯಾಣ ಬೆಳೆಸಿದ ಸಿಎಸ್ ಕೆ ಆಟಗಾರರು

ಶನಿವಾರ, 15 ಆಗಸ್ಟ್ 2020 (10:46 IST)
ಚೆನ್ನೈ: ಐಪಿಎಲ್ 13 ಗೆ ತಯಾರಿ ನಡೆಸಲು ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ವಿಶೇಷ ವಿಮಾನದ ಮೂಲಕ ಚೆನ್ನೈಗೆ ಪ್ರಯಾಣ ಬೆಳೆಸಿದ್ದಾರೆ.


ವಿಶೇಷ ವಿಮಾನದಲ್ಲಿ ಸಹ ಆಟಗಾರರೊಂದಿಗೆ ಪ್ರಯಾಣ ಬೆಳೆಸಿರುವ ಸುರೇಶ‍್ ರೈನಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ಮತ್ತೆ ತರಬೇತಿಯಲ್ಲಿ ಪಾಲ್ಗೊಳ್ಳಲು ಕಾತುರರಾಗಿರುವುದಾಗಿ ಬರೆದುಕೊಂಡಿದ್ದಾರೆ.

ಇವರ ಜತೆ ನಾಯಕ ಧೋನಿ ಕೂಡಾ ಚೆನ್ನೈಗೆ ಬಂದಿಳಿದಿದ್ದಾರೆ. ಒಂದು ವಾರಗಳ ಕಾಲ ಇಲ್ಲಿ ತರಬೇತಿ ಪಡೆಯಲಿರುವ ಆಟಗಾರರು ಬಳಿಕ ಯುಎಇನತ್ತ ಪ್ರಯಾಣ ಬೆಳೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ