ಐಪಿಎಲ್ 2022: ಹಾರ್ದಿಕ್ ಪಾಂಡ್ಯಗೆ ರಿಷಬ್ ಪಡೆ ಎದುರಾಳಿ

ಶನಿವಾರ, 2 ಏಪ್ರಿಲ್ 2022 (11:42 IST)
ಮುಂಬೈ: ಐಪಿಎಲ್ 2022 ರಲ್ಲಿ ಮೊದಲ ಬಾರಿಗೆ ಕಣಕ್ಕಿಳಿದು ಮೊದಲ ಪಂದ್ಯವನ್ನೇ ಗೆದ್ದು ಬೀಗುತ್ತಿರುವ ಗುಜರಾತ್ ಟೈಟಾನ್ಸ್ ಗೆ ಇಂದು ಡೆಲ್ಲಿ ಕ್ಯಾಪಿಟಲ್ಸ್ ಎದುರಾಳಿಯಾಗಿದೆ.

ಎರಡೂ ತಂಡಕ್ಕೆ ಇದು ಎರಡನೇ ಪಂದ್ಯ. ಎರಡೂ ತಂಡಗಳು ಮೊದಲ ಪಂದ್ಯವನ್ನು ಗೆದ್ದು ಆತ್ಮವಿಶ್ವಾಸದಲ್ಲಿದೆ. ಅಕ್ಸರ್ ಪಟೇಲ್, ರಿಷಬ್ ಪಂತ್ ರಂತಹ ಘಟಾನುಘಟಿಗಳನ್ನು ಒಳಗೊಂಡ ಡೆಲ್ಲಿ ಬಲಾಢ್ಯವಾಗಿದೆ.

ಅತ್ತ ಗುಜರಾತ್ ಕೂಡಾ ಹಾರ್ದಿಕ್ ಪಾಂಡ್ಯ ಬಿಗ್ ಹಿಟ್ಟರ್ ಆಗಿದ್ದರೆ, ಮೊಹಮ್ಮದ್ ಶಮಿ ಕಳೆದ ಪಂದ್ಯದಲ್ಲಿ ಬೌಲಿಂಗ್ ಮಾಡಿದ ರೀತಿ ಎದುರಾಳಿಗಳಲ್ಲಿ ನಡುಕ ಹುಟ್ಟಿಸಬಹುದು. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ