೨೦೨೪ರ ಲೋಕಸಮರ ಇನ್ನೇನು ಸನಿಹವಾಗ್ತಿದೆ. ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟದ ನಡುವೆ ಡೆಲ್ಲಿಯ ಗದ್ದುಗೆಯನ್ನು ಏರಲು ಹಲವು ರೀತಿಯ ಕಸರತ್ತುಗಳು ನಡೆಯುತ್ತಿವೆ. ಹೀಗಿದ್ದರೂ ಕೂಡ ಇತ್ತಾ ೨೦೨೪ರಲ್ಲಿ ಆರಂಭವಾಗಲಿರುವ ಐಪಿಎಲ್ ಕ್ರಿಕೆಟ್‌ಗೂ, ಅತ್ತಾ ದೇಶದಲ್ಲಿ ನಡೆಯಲಿರುವ ಪಾರ್ಲಿಮೆಂಟ್ ಎಲೆಕ್ಷನ್‌ಗೂ ಯಾವುದೇ ಸಮಸ್ಯೆ ಎದುರಾಗಲ್ಲ. ಯಾಕಂದರೆ, ಚುನಾವಣಾ ಆಯೋಗ ಎಲೆಕ್ಷನ್ ದಿನಾಂಕ ನಿಗದಿಪಡಿಸಿದ ಬಳಿಕ, ಐಪಿಎಲ್ ವೇಳಾಪಟ್ಟಿಯನ್ನು ಸಿದ್ಧಪಡಿಸಲು ಬಿಸಿಸಿಐ ಚಿಂತನೆಯನ್ನು ನಡೆಸಲಿದೆ ಅಂತೆ. ಹಾಗಾಗಿ ಚುನಾವಣಾ ದಿನಾಂಕವನ್ನು ನೋಡಿಕೊಂಡು, ಐಪಿಎಲ್ ವೇಳಾಪಟ್ಟಿಯನ್ನು ರೆಡಿಮಾಡಲು ಈಗಿನಿಂದಲೇ ಬಿಸಿಸಿಐ ಪ್ಲಾನ್ ಮಾಡಿಕೊಂಡಿದೆ ಎನ್ನಲಾಗ್ತಿದೆ.