ಸಿಎಸ್ ಕೆಗೆ ಧೋನಿಯೇ ಮಹಾರಾಜ

ಮಂಗಳವಾರ, 6 ಜುಲೈ 2021 (13:22 IST)
ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡವೆಂದರೆ ಧೋನಿ, ಧೋನಿಯೆಂದರೆ ಸಿಎಸ್ ಕೆ. ಧೋನಿಯಿದ್ದರೇ ಈ ತಂಡಕ್ಕೆ ಅಸ್ತಿತ್ವ. ಧೋನಿಯೇ ಈ ತಂಡದ ಮಹಾರಾಜ ಎಂದು ಆಸೀಸ್ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಅಭಿಪ್ರಾಯಪಟ್ಟಿದ್ದಾರೆ.


‘ಧೋನಿ ಯಾವುದೇ ಕಾರಣಕ್ಕೂ ಫ್ರಾಂಚೈಸಿ ಬಿಡಲ್ಲ. ಅವರು ಬಳಿಕ ಕೋಚಿಂಗ್ ಕೆಲಸ ಮಾಡಲಿದ್ದಾರೆ. ಅವರು ಯಾವತ್ತಿಗೂ ಸಿಎಸ್ ಕೆ ಮಹಾರಾಜ’ ಎಂದು ಬ್ರಾಡ್ ಹಾಗ್ ಅಭಿಮಾನಿಯೊಬ್ಬರ ಪ್ರಶ್ನೆಗೆ ಸಾಮಾಜಿಕ ಜಾಲತಾಣದಲ್ಲಿ ಉತ್ತರಿಸಿದ್ದಾರೆ.

ಈ ಸೀಸನ್ ಮುಗಿದ ಮೇಲೆ ಧೋನಿ ಐಪಿಎಲ್ ನಿಂದ ನಿವೃತ್ತಿಯಾಗಲಿದ್ದಾರೆ ಎಂಬ ಊಹಾಪೋಹಗಳಿತ್ತು. ಆದರೆ ಬ್ರಾಡ್ ಹಾಗ್ ಹೇಳಿದ್ದು ನೋಡಿದರೆ ಧೋನಿ ಒಂದು ವೇಳೆ ಆಟದಿಂದ ನಿವೃತ್ತಿಯಾದರೂ, ಕೋಚ್ ಆಗಿ ಸಿಎಸ್ ಕೆ ತಂಡದಲ್ಲಿಯೇ ಮುಂದುವರಿಯಲಿದ್ದಾರೆ ಎನ್ನುವುದು ಪಕ್ಕಾ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ