ಕ್ರಿಕೇಟ್ ಅಭಿಮಾನಿಗಳು ತಪ್ಪದೇ ಓದಿ

ಶನಿವಾರ, 3 ಜುಲೈ 2021 (10:10 IST)
IPL 2022: ಕೊರೋನಾ ಕಾರಣದಿಂದ ಬಿಸಿಸಿಐ ವ್ಯವಹಾರಿಕ ಲೆಕ್ಕಚಾರಗಳು ತಲೆಕೆಳಗಾಗಿದ್ದು, ಇತ್ತ ಭಾರೀ ಮೊತ್ತದ ಲಾಭಗಳಿಸಬೇಕೆಂದರೆ ಹೊಸ ತಂಡಗಳ ಸೇರ್ಪಡೆ ಅನಿವಾರ್ಯವಾಗಿದೆ.


 ಆದರೆ ಕೊರೋನಾ ಪರಿಸ್ಥಿತಿಯಲ್ಲಿ ದೊಡ್ಡ ಮೊತ್ತದೊಂದಿಗೆ ತಂಡಗಳನ್ನು ಖರೀದಿಸಲು ಉದ್ಯಮಿಗಳು ಮುಂದಾಗುತ್ತಾರಾ ಎಂಬ ಪ್ರಶ್ನೆ ಕೂಡ ಬಿಸಿಸಿಐ ಮುಂದಿದೆ.
ರಂಗು ರಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 13 ಕ್ಕೆ ಅಕ್ಟೋಬರ್ನಲ್ಲಿ ತೆರೆ ಬೀಳಲಿದೆ. ಅದರ ಬೆನ್ನಲ್ಲೇ ಸೀಸನ್ 14 ರ ತಯಾರಿಗಳನ್ನು ಬಿಸಿಸಿಐ ಶುರು ಮಾಡಲಿದೆ. ಈ ಬಾರಿ ಮೆಗಾ ಹರಾಜು ನಡೆಯುವುದರಿಂದ ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಮುಂದಿನ ಸೀಸನ್ ತಯಾರಿಗಳು ಆರಂಭವಾಗಲಿದೆ. ಅಷ್ಟೇ ಅಲ್ಲದೆ ಮುಂದಿನ ಸೀಸನ್ನಲ್ಲಿ ಮತ್ತೆರಡು ಹೊಸ ತಂಡಗಳನ್ನು ಪರಿಚಯಿಸುವುದಾಗಿ ಕಳೆದ ವರ್ಷವೇ ಬಿಸಿಸಿಐ ಘೋಷಿಸಿತ್ತು.

ಕೊರೋನಾ ಪರಿಸ್ಥಿತಿ ಹಾಗೂ ಪ್ರಸ್ತುತ ಮಾರ್ಕೆಂಟಿಂಗ್ ಸ್ಟಾಟರ್ಜಿ ಸರಿ ಹೊಂದಿದರೆ ಹೊಸ ತಂಡಗಳ ಸೇರ್ಪಡೆಯಾಗಲಿದೆ. ಏಕೆಂದರೆ ಕೊರೋನಾ ಕಾರಣದಿಂದ ಬಿಸಿಸಿಐ ವ್ಯವಹಾರಿಕ ಲೆಕ್ಕಚಾರಗಳು ತಲೆಕೆಳಗಾಗಿದ್ದು, ಇತ್ತ ಭಾರೀ ಮೊತ್ತದ ಲಾಭಗಳಿಸಬೇಕೆಂದರೆ ಹೊಸ ತಂಡಗಳ ಸೇರ್ಪಡೆ ಅನಿವಾರ್ಯವಾಗಿದೆ. ಆದರೆ ಕೊರೋನಾ ಪರಿಸ್ಥಿತಿಯಲ್ಲಿ ದೊಡ್ಡ ಮೊತ್ತದೊಂದಿಗೆ ತಂಡಗಳನ್ನು ಖರೀದಿಸಲು ಉದ್ಯಮಿಗಳು ಮುಂದಾಗುತ್ತಾರಾ ಎಂಬ ಪ್ರಶ್ನೆ ಕೂಡ ಬಿಸಿಸಿಐ ಮುಂದಿದೆ.
ಏಕೆಂದರೆ 2 ಹೊಸ ತಂಡಗಳ ಮಾರಾಟದಿಂದ 4 ಸಾವಿರ ಕೋಟಿಗಿಂತ ಅಧಿಕ ಮೊತ್ತಗಳಿಸಬೇಕೆಂಬ ಪ್ಲ್ಯಾನ್ ರೂಪಿಸಿದೆ ಬಿಸಿಸಿಐ. ಹೌದು, ಬಿಸಿಸಿಐ ಮೂಲಗಳ ಪ್ರಕಾರ ಐಪಿಎಲ್ಗೆ ಹೊಸದಾಗಿ ಸೇರ್ಪಡೆಯಾಗಲಿರುವ ಒಂದು ತಂಡದ ಮೂಲ ಬೆಲೆ 1800 ಕೋಟಿ ರೂ. ಎನ್ನಲಾಗಿದೆ. ಅಂದರೆ ಎರಡು ತಂಡಗಳ ಮೂಲ ಬೆಲೆ 3600 ಕೋಟಿ ರೂ. ಈ ತಂಡಗಳನ್ನು ಹರಾಜಿಗಿಟ್ಟರೆ ಕಡಿಮೆ ಎಂದರೂ 4 ರಿಂದ 5 ಸಾವಿರ ರೂ. ಬಿಡ್ಡಿಂಗ್ ನಡೆಸಬೇಕೆಂಬ ಯೋಜನೆಯಲ್ಲಿದೆ ಬಿಸಿಸಿಐ.
ಪ್ರಸ್ತುತ ಐಪಿಎಲ್ ತಂಡಗಳ ಪ್ರೈಸ್ ವ್ಯಾಲ್ಯೂ 2000 ಸಾವಿರ ಕೋಟಿಯನ್ನು ದಾಟಿದೆ. ಹೀಗಾಗಿ ಈ ಮೊತ್ತಕ್ಕೆ ಅನುಗುಣವಾಗಿ ಹೊಸ ತಂಡಗಳ ಬೆಲೆ ನಿರ್ಧರಿಸಲಾಗುತ್ತದೆ. ಅದರಂತೆ ಹೊಸ ತಂಡಗಳು 2200 ರಿಂದ 2900 ಕೋಟಿ ರೂ. ಒಳಗೆ ಮಾರಾಟವಾಗಬಹುದು. ಇದರಿಂದ ಬಿಸಿಸಿಐ ಬೊಕ್ಕಸಕ್ಕೆ 4 ರಿಂದ 5 ಸಾವಿರ ಕೋಟಿ ಬರಲಿದೆ.
 ಈಗಿರುವ ತಂಡಗಳ ಪ್ರೈಸ್ ವಾಲ್ಯೂ ನೋಡುವುದಾದರೆ ಐದು ಬಾರಿ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಬೆಲೆ 2700 ರಿಂದ 2800 ಕೋಟಿ ರೂ. ಹಾಗೆಯೇ ಚೆನ್ನೈ ಸೂಪರ್ ಕಿಂಗ್ಸ್ 2200 ರಿಂದ 2300 ಕೋಟಿ ಬೆಲೆ ಬಾಳುತ್ತದೆ. ಅಷ್ಟೇ ಯಾಕೆ ರಾಜಸ್ಥಾನ್ ರಾಯಲ್ಸ್ ತಂಡದ ಪ್ರೈಸ್ ವ್ಯಾಲ್ಯೂ 1855 ಕೋಟಿ ರೂ. ಇದೆ.
  ಹೀಗಾಗಿ ಹೊಸ ತಂಡಗಳು 2000 ಕೋಟಿಯಿಂದ 3000 ಕೋಟಿಯೊಳಗೆ ಸೇಲ್ ಆಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಕೊರೋನಾ ಪರಿಸ್ಥಿತಿ ನಡುವೆ ದೊಡ್ಡ ಉದ್ಯಮಿಗಳು ಇಷ್ಟೊಂದು ಮೊತ್ತವನ್ನು ಬಿಡ್ ಮಾಡಲಿದ್ದಾರಾ ಎಂಬ ಚಿಂತೆ ಬಿಸಿಸಿಐ ಮುಂದಿದೆ. ಹೀಗಾಗಿಯೇ ಬಿಸಿಸಿಐ ಮಾರ್ಕೆಂಟಿಂಗ್ ಸ್ಟ್ರಾಟಜಿ ನೋಡಿ ಹೆಚ್ಚುವರಿ ತಂಡಗಳ ಸೇರ್ಪಡೆ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದೆ.
ಒಂದು ವೇಳೆ ಎಲ್ಲವೂ ಅಂದುಕೊಂಡಂತೆ ನಡೆದರೆ ಕೇವಲ 2 ತಂಡಗಳ ಮಾರಾಟದಿಂದ ಬಿಸಿಸಿಐ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಎಂಬ ಹಣೆಪಟ್ಟಿಯನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ