ಐಪಿಎಲ್ ಗೆ ಲಭ್ಯವಿರುವ ಇಂಗ್ಲೆಂಡ್ ಆಟಗಾರರ ಲಿಸ್ಟ್

ಸೋಮವಾರ, 13 ಸೆಪ್ಟಂಬರ್ 2021 (08:55 IST)
ದುಬೈ: ಐಪಿಎಲ್ 14 ರ ಎರಡನೇ ಭಾಗದಲ್ಲಿ ಇಂಗ್ಲೆಂಡ್ ನ ಎಲ್ಲಾ ಆಟಗಾರರು ಭಾಗಿಯಾಗುತ್ತಿಲ್ಲ. ಆದರೆ ಲಭ್ಯವಿರುವ ಆಟಗಾರರು ಯಾರೆಲ್ಲಾ ಎಂದು ನೋಡೋಣ.


ಈಗಾಗಲೇ ಸ್ಟಾರ್ ಆಟಗಾರರಾದ ಡೇವಿಡ್ ಮಲನ್, ಕ್ರಿಸ್ ವೋಕ್ಸ್, ಜಾನಿ ಬೇರ್ ಸ್ಟೋ ಐಪಿಎಲ್ ನಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದ್ದಾರೆ. ಇವರ ಹೊರತಾಗಿ ಇನ್ನೂ ಕೆಲವು ಆಟಗಾರರು ಐಪಿಎಲ್ ನ ಭಾಗವಾಗಿದ್ದು, ಅವರು ಆಡಲಿದ್ದಾರೆ.

ಆ ಪೈಕಿ ಸ್ಯಾಮ್ ಕ್ಯುರೇನ್,  ಮೊಯಿನ್ ಅಲಿ, ಇಯಾನ್ ಮಾರ್ಗನ್, ಜೇಸನ್ ರಾಯ್, ಕ್ರಿಸ್ ಜೋರ್ಡಾನ್, ಆದಿಲ್ ರಶೀದ್,  ಲಿಯಾಮ್ ಲಿವಿಂಗ್ ಸ್ಟೋನ್ ಮುಂತಾದ ಕ್ರಿಕೆಟಿಗರು ಐಪಿಎಲ್ 14 ರ ಎರಡನೇ ಭಾಗದಲ್ಲಿ ಆಡಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ