ಟೀಂ ಇಂಡಿಯಾದಲ್ಲಿ ಟೆಸ್ಟ್ ಸ್ಪೆಷಲಿಸ್ಟ್ ಗಳು ಬೇಕಾಗಿದ್ದಾರೆ!

ಭಾನುವಾರ, 12 ಸೆಪ್ಟಂಬರ್ 2021 (12:33 IST)
ಲಂಡನ್: ಇತ್ತೀಚೆಗೆ ಟೀಂ ಇಂಡಿಯಾ ಸೀಮಿತ ಓವರ್ ಕ್ರಿಕೆಟ್ ನಲ್ಲಿ ಮತ್ತೊಂದು ತಂಡವನ್ನು ಏಕಕಾಲಕ್ಕೆ ಆಡಿಸುವಷ್ಟು ಸಾಮರ್ಥ್ಯ ಹೊಂದಿದೆ. ಯಾಕೆಂದರೆ ಸೀಮಿತ ಓವರ್ ಗಳಲ್ಲಿ ಎರಡು ತಂಡಗಳಿಗಾಗುವಷ್ಟು ಪ್ರತಿಭಾವಂತರು ಭಾರತದಲ್ಲಿದ್ದಾರೆ.


ಆದರೆ ಟೆಸ್ಟ್ ತಂಡದಲ್ಲಿ ಆ ಪರಿಸ್ಥಿತಿಯಿಲ್ಲ. ಹೀಗಾಗಿಯೇ ಫಾರ್ಮ್ ಕೊರತೆಯಿದ್ದರೂ ಭಾರತ ಅಜಿಂಕ್ಯಾ ರೆಹಾನೆ, ಚೇತೇಶ್ವರ ಪೂಜಾರ ಮತ್ತಿತರರನ್ನೇ ಅವಲಂಬಿಸಿದೆ.

ಹೀಗಾಗಿ ಟೀಂ ಇಂಡಿಯಾ ತುರ್ತಾಗಿ ಟೆಸ್ಟ್ ಕ್ರಿಕೆಟ್ ಗೆ ತಜ್ಞ ಆಟಗಾರರನ್ನು ಹುಟ್ಟುಹಾಕುವ ಅಗತ್ಯವಿದೆ. ಸೀಮಿತ ಓವರ್ ಗಳಲ್ಲಿ ಐಪಿಎಲ್ ಆಡಿದ ಅನುಭವದ ಮೇಲೆ ಅವಕಾಶ ಪಡೆಯುವ ಕ್ರಿಕೆಟಿಗರು ರನ್ ಗಳಿಸಿ ಗೆಲುವು ಕೊಡಿಸುತ್ತಾರೆ. ಆದರೆ ಈ ಕ್ರಿಕೆಟಿಗರಿಗೆ ಹೊಡೆಬಡಿಯ ಕ್ರಿಕೆಟ್ ಅಭ್ಯಾಸವಾಗಿರುತ್ತದೆ.

ಇತ್ತೀಚೆಗೆ ಕೊರೋನಾದಿಂದಾಗಿ ರಣಜಿ ಕ್ರಿಕೆಟ್ ಪಂದ್ಯಗಳೂ ನಡೆಯುತ್ತಿಲ್ಲ. ಇದರಿಂದಾಗಿ ಟೆಸ್ಟ್ ಕ್ರಿಕೆಟ್ ಗೆ ಹೇಳಿ ಮಾಡಿಸಿದಂತಹ ನಿಂತು, ತಾಳ್ಮೆಯಿಂದ ಆಡುವ, ತಾಂತ್ರಿಕವಾಗಿ ಸುಧಾರಿತ ಬ್ಯಾಟ್ಸ್ ಮನ್ ಗಳು ಸಿಗುತ್ತಿಲ್ಲ. ಇದು ಭಾರತ ಟೆಸ್ಟ್ ತಂಡದ ಮೇಲೆ ಪರಿಣಾಮ ಬೀರುತ್ತಿದೆ. ಆರಂಭ ಉತ್ತಮವಾಗಿದ್ದರೂ ದಿಡೀರ್ ಬ್ಯಾಟಿಂಗ್ ಕುಸಿತವಾಗುತ್ತಿರುವುದು ಇದಕ್ಕೆ ನಿದರ್ಶನ. ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ ಮುಂದೆಯೂ ಯಶಸ್ವಿಯಾಗಬೇಕಾದರೆ ಸ್ಪೆಷಲಿಸ್ಟ್ ಗಳನ್ನು ಹುಟ್ಟುಹಾಕುವುದು ಅನಿವಾರ್ಯವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ