ಐಪಿಎಲ್ 14: ಸಿಎಸ್ ಕೆ ಫೈನಲ್ಸ್ ದಾಖಲೆ, ಡೆಲ್ಲಿಗೆ ಮತ್ತೊಂದು ಚಾನ್ಸ್

ಸೋಮವಾರ, 11 ಅಕ್ಟೋಬರ್ 2021 (09:30 IST)
ದುಬೈ: ಐಪಿಎಲ್ 14 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತೊಮ್ಮೆ ಫೈನಲ್ ಗೇರಿ ದಾಖಲೆ ಮಾಡಿದೆ. ಅತೀ ಹೆಚ್ಚು ಒಂಭತ್ತನೇ ಬಾರಿಗೆ ಚೆನ್ನೈ ಫೈನಲ್ ತಲುಪಿದ ಸಾಧನೆ ಮಾಡಿದೆ.


ಧೋನಿ ಐಪಿಎಲ್ ಫೈನಲ್ಸ್ ನಲ್ಲಿ ತಂಡವನ್ನು ಮುನ್ನಡೆಸುವ ಅತೀ ಹಿರಿಯ ನಾಯಕ ಎಂಬ ದಾಖಲೆ ಮಾಡಲಿದ್ದಾರೆ. ಡೆಲ್ಲಿ ವಿರುದ್ಧ ಸಿಎಸ್ ಕೆ ಮೂರು ಬಾರಿ ಪ್ಲೇ ಆಫ್ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಮೂರೂ ಬಾರಿಯೂ ಗೆದ್ದು ಸಾಧನೆ ಮಾಡಿದೆ.

ಇನ್ನು, ಡೆಲ್ಲಿಗೆ ಇಲ್ಲಿಗೇ ಫೈನಲ್ ಕನಸು ಮುಕ್ತಾಯವಾಗಿಲ್ಲ. ಇನ್ನೊಂದು ಕ್ವಾಲಿಫೈಯರ್ ಪಂದ್ಯವಾಡಬೇಕಿರುವ ಡೆಲ್ಲಿ ಅಲ್ಲಿ ಗೆದ್ದರೆ ಫೈನಲ್ ಗೇರಬಹುದಾಗಿದೆ. ಒಂದು ವೇಳೆ ಡೆಲ್ಲಿ ಫೈನಲ್ ಗೇರಲು ಯಶಸ್ವಿಯಾದರೆ ರಿಷಬ್ ಪಂತ್ ಫೈನಲ್ ನಲ್ಲಿ ತಂಡ ಮುನ್ನಡೆಸಿದ ಕಿರಿಯ ನಾಯಕ ಎಂಬ ದಾಖಲೆ ಮಾಡಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ