ಐಪಿಎಲ್ 14: ವಿರಾಟ್ ಕೊಹ್ಲಿಗಾಗಿ ಈ ಸಲ ಕಪ್ ಗೆಲ್ಲುತ್ತೇವೆ ಎಂದ ಎಸ್. ಭರತ್
ಈ ಬಾರಿ ಅತ್ಯುತ್ತಮ ಫಾರ್ಮ್ ನಲ್ಲಿರುವ ಯುವ ಬ್ಯಾಟ್ಸ್ ಮನ್ ಶ್ರೀಕರ್ ಭರತ್ ಈ ಬಗ್ಗೆ ಮಾತನಾಡಿದ್ದು, ಈ ಬಾರಿ ಕಪ್ ಗೆದ್ದು ವಿರಾಟ್ ಭಾಯ್ ಗೆ ನೀಡಿದರೆ ಅದು ಕೇಕ್ ಮೇಲೆ ಚೆರಿಯಂತೆ. ಅದಕ್ಕಿಂತ ಹೆಚ್ಚು ವಿರಾಟ್ ಜೊತೆ ಆಡುವುದೇ ಒಂದು ದೊಡ್ಡ ಹೆಮ್ಮೆ. ಅವರು ಯುವ ಆಟಗಾರರನ್ನು ತುಂಬಾ ಪ್ರೋತ್ಸಾಹಿಸುತ್ತಾರೆ. ನಮ್ಮಲ್ಲಿ ಆತ್ಮವಿಶ್ವಾಸ ತುಂಬುತ್ತಾರೆ. ಸ್ನೇಹಿತರಂತೆ ಇರುತ್ತಾರೆ. ಅವರ ಜೊತೆ ಇರುವುದೇ ನಮಗೆ ಆಶೀರ್ವಾದದಂತೆ ಎಂದಿದ್ದಾರೆ.