ಐಪಿಎಲ್ 14: ಪ್ರಬಲ ಚೆನ್ನೈಗೆ ಹೈದರಾಬಾದ್ ಎದುರಾಳಿ

ಗುರುವಾರ, 30 ಸೆಪ್ಟಂಬರ್ 2021 (09:05 IST)
ದುಬೈ: ಐಪಿಎಲ್ 14 ರ ಇಂದಿನ ಪಂದ್ಯದಲ್ಲಿ ಪ್ರಬಲ ಚೆನ್ನೈ ಸೂಪರ್ ಕಿಂಗ್ಸ್ ಗೆ ಇಂದು ಸನ್ ರೈಸರ್ಸ್ ಹೈದರಾಬಾದ್ ಎದುರಾಳಿಯಾಗಿದೆ.


ಒಂದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ತಂಡವಾದರೆ ಇನ್ನೊಂದು ಕೊನೆಯ ಸ್ಥಾನದಲ್ಲಿದೆ. ಹಾಗಿದ್ದರೂ ಕಳೆದ ಪಂದ್ಯದಲ್ಲಿ ಹೈದರಾಬಾದ್ ತೋರಿದ ನಿರ್ವಹಣೆ ತೋರಿದರೆ ಚೆನ್ನೈಗೆ ಶಾಕ್ ಕೊಡಬಹುದು.

ಈ ಪಂದ್ಯದಲ್ಲೂ ವಾರ್ನರ್ ಆಡುವುದು ಡೌಟ್. ಇನ್ನು, ಚೆನ್ನೈಗೆ ಆಲ್ ರೌಂಡರ್ ರವೀಂದ್ರ ಜಡೇಜಾ ಬಲವಿದೆ. ಧೋನಿಗೆ ರನ್ ಗಳಿಸುವ ಒತ್ತಡವಿದೆ. ಇದಕ್ಕಾಗಿ ಅವರ ಆಡುವ ಕ್ರಮಾಂಕದಲ್ಲಿ ಬದಲಾವಣೆಯಾದರೂ ಅಚ್ಚರಿಯಿಲ್ಲ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ