ಐಪಿಎಲ್ 14: ಆರೆಂಜ್ ಕ್ಯಾಪ್ ಗಾಗಿ ರಾಹುಲ್, ಧವನ್, ಸ್ಯಾಮ್ಸನ್ ನಡುವೆ ಗುದ್ದಾಟ

ಬುಧವಾರ, 29 ಸೆಪ್ಟಂಬರ್ 2021 (12:10 IST)
ದುಬೈ: ಐಪಿಎಲ್ 14 ರಲ್ಲಿ ಗರಿಷ್ಠ ರನ್ ಸ್ಕೋರರ್ ಗೆ ಸಿಗುವ ಆರೆಂಜ್ ಕ್ಯಾಪ್ ಗಾಗಿ ಈಗ ಸಂಜು ಸ್ಯಾಮ್ಸನ್, ಶಿಖರ್ ಧವನ್, ಕೆಎಲ್ ರಾಹುಲ್ ನಡುವೆ ಪೈಪೋಟಿ ಏರ್ಪಟ್ಟಿದೆ.


ಮೊನ್ನೆಯ ಪಂದ್ಯ ಮುಗಿದ ಬಳಿಕ ಆರೆಂಜ್ ಕ್ಯಾಪ್ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಪಾಲಾಗಿತ್ತು. ಸಂಜು ಈ ಕೂಟದಲ್ಲಿ 433 ರನ್ ಗಳಿಸಿದ್ದಾರೆ.  ಶಿಖರ್ ಧವನ್ 430 ರನ್ ಗಳಿಸಿ ಅವರ ಹಿಂದೆಯೇ ಇದ್ದರು. ನಿನ್ನೆಯ ಪಂದ್ಯದ ಬಳಿಕ ಧವನ್ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಇದೀಗ 454 ರನ್ ಅವರ ಖಾತೆಯಲ್ಲಿದೆ. ಆದರೆ ಪಂಜಾಬ್ ನಾಯಕ ಕೆಎಲ್ ರಾಹುಲ್ ನಿನ್ನೆಯ ಪಂದ್ಯದ ಬಳಿಕ 422 ರನ್ ಗಳೊಂದಿಗೆ ಈ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಂದಿದ್ದಾರೆ.

ಗರಿಷ್ಠ ವಿಕೆಟ್ ಟೇಕರ್ ಗಾಗಿ ನೀಡುವ ಪರ್ಪಲ್ ಕ್ಯಾಪ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯುವ ಬೌಲರ್ ಹರ್ಷಲ್ ಪಟೇಲ್ ಉಳಿಸಿಕೊಂಡಿದ್ದಾರೆ. ಮೊನ್ನೆಯ ಪಂದ್ಯದಲ್ಲಿ ಹ್ಯಾಟ್ರಿಕ್ ಸಹಿತ ನಾಲ್ಕು ವಿಕೆಟ್ ಕಬಳಿಸಿದ್ದ ಹರ್ಷಲ್ ಇದುವರೆಗೆ ಈ ಕೂಟದಲ್ಲಿ 23 ವಿಕೆಟ್ ಕಬಳಿಸಿ ಅಗ್ರ ಸ್ಥಾನದಲ್ಲಿದ್ದಾರೆ. ವಿಶೇಷವೆಂದರೆ ಎರಡನೆಯ ಸ್ಥಾನದಲ್ಲಿರುವ ಆವೇಶ್ ಖಾನ್ 15 ವಿಕೆಟ್ ಗಳಷ್ಟೇ ಗಳಿಸಿದ್ದು, ಸಾಕಷ್ಟು ಅಂತರದಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ