ಕೊಹ್ಲಿ ವಿರುದ್ಧ ಬಿಸಿಸಿಐಗೆ ದೂರಿದ್ದು ಅಶ್ವಿನ್ ಮಾತ್ರವಲ್ಲ! ಈ ಆಟಗಾರರೂ ಶಾಮೀಲು!

ಬುಧವಾರ, 29 ಸೆಪ್ಟಂಬರ್ 2021 (17:20 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಸಹ ಆಟಗಾರರಿಂದ ತೀವ್ರ ವಿಮರ್ಶೆಗೊಳಗಾಗಿದ್ದರು ಎಂಬುದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ.


ಕೊಹ್ಲಿ ವಿರುದ್ಧ ಬಿಸಿಸಿಐ ಕಾರ್ಯದರ್ಶಿ ಜಯ್ ಶಾಗೆ ಆರ್. ಅಶ್ವಿನ್ ದೂರು ನೀಡಿದ್ದರು ಎಂದು ವರದಿಯಾಗಿತ್ತು. ಇದೀಗ ಇನ್ನೊಂದು ಮೂಲಗಳ ಪ್ರಕಾರ ಕೇವಲ ಅಶ್ವಿನ್ ಮಾತ್ರವಲ್ಲ, ಹಿರಿಯ ಆಟಗಾರರಾದ ಅಜಿಂಕ್ಯಾ ರೆಹಾನೆ, ಚೇತೇಶ್ವರ ಪೂಜಾರ ಕೂಡಾ ಕೊಹ್ಲಿ ವಿರುದ್ಧ ದೂರು ನೀಡಿದ್ದರು ಎನ್ನಲಾಗಿದೆ.

ಈ ಇಬ್ಬರು ಆಟಗಾರರು ಕರೆ ಮಾಡಿದ ಬಳಿಕ ಬಿಸಿಸಿಐ ಕೊಹ್ಲಿ ನಾಯಕತ್ವದ ಬಗ್ಗೆ ಇತರ ಆಟಗಾರರ ಅಭಿಪ್ರಾಯವನ್ನೂ ಕೇಳಿತ್ತು ಎನ್ನಲಾಗಿದೆ. ವಿಶೇಷವೆಂದರೆ ಈ ಇಬ್ಬರೂ ಆಟಗಾರರು ಸತತವಾಗಿ ರನ್ ಗಳಿಸಲು ವಿಫಲರಾಗಿದ್ದರೂ ಕೊಹ್ಲಿ ಇವರಿಗೆ ಪದೇ ಪದೇ ಅವಕಾಶ ನೀಡಿದ್ದರು. ಆದರೆ ಅವರ ಬದ್ಧತೆ ಬಗ್ಗೆ ಕೊಹ್ಲಿ ಕೆಂಡಕಾರಿದ್ದೇ ಈ ದೂರಿನ ಹಿಂದಿನ ಕಾರಣ ಎಂಬ ಸುದ್ದಿ ಹರಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ