ಐಪಿಎಲ್ 14: ಡೆಲ್ಲಿ ವಿರುದ್ಧ ಗೆದ್ದ ಕೆಕೆಆರ್

ಮಂಗಳವಾರ, 28 ಸೆಪ್ಟಂಬರ್ 2021 (20:19 IST)
ದುಬೈ: ಐಪಿಎಲ್ 14 ರ ಇಂದಿನ ಮೊದಲ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡ 3 ವಿಕೆಟ್ ಗಳಿಂದ ರೋಚಕವಾಗಿ ಗೆದ್ದುಕೊಂಡಿದೆ.


ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿತ್ತು. ಈ ಸುಲಭ ಗುರಿ ಬೆನ್ನತ್ತಿದ್ದ ಕೆಕೆಆರ್ ಕೂಡಾ ನಿಗದಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು.  ಆರಂಭಿಕ ಶುಬ್ನಂ ಗಿಲ್ 30, ನಿತೀಶ್ ರಾಣಾ ಔಟಾಗದೇ 36, ಸುನಿಲ್ ನರೈನ್ 26 ರನ್ ಗಳಿಸಿದರು.

ಇದರೊಂದಿಗೆ ಕೆಕೆಆರ್ 18.2 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 130 ರನ್ ಗಳಿಸಿ ಪಂದ್ಯ ಗೆದ್ದುಕೊಂಡಿತು. ಇದರೊಂದಿಗೆ ಐಪಿಎಲ್ 14 ರ ಎರಡನೇ ಭಾಗದಲ್ಲಿ ಕೆಕೆಆರ್ ಆಡಿದ ನಾಲ್ಕು ಪಂದ್ಯಗಳ ಪೈಕಿ ಕೇವಲ ಒಂದು ಪಂದ್ಯ ಸೋತು ಅದ್ಭುತ ನಿರ್ವಹಣೆ ತೋರಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ