ವಿರಾಟ್ ಕೊಹ್ಲಿ ವಿರುದ್ಧ ಬಿಸಿಸಿಐಗೆ ಅಶ್ವಿನ್ ದೂರು? ನಾಯಕತ್ವ ಕಳೆದುಕೊಳ್ಳಲು ಇದೇ ಕಾರಣ?!

ಬುಧವಾರ, 29 ಸೆಪ್ಟಂಬರ್ 2021 (08:55 IST)
ಮುಂಬೈ: ಟೀಂ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಮತ್ತು ಆರ್. ಅಶ್ವಿನ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಇಂಗ್ಲೆಂಡ್ ಸರಣಿ ವೇಳೆಯೇ ಕೇಳಿಬಂದಿತ್ತು. ಅದಕ್ಕೆ ಪುಷ್ಠಿ ನೀಡುವ ವರದಿಯೊಂದು ಈಗ ಹರಿದಾಡುತ್ತಿದೆ.

Photo Courtesy: Google

ನ್ಯೂಜಿಲೆಂಡ್ ವಿರುದ್ಧ ನಡೆದಿದ್ದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಸೋತ ಬಳಿಕ ತಂಡದ ಆಟಗಾರರೊಬ್ಬರು ಪೂರ್ಣ ಬದ್ಧತೆಯಿಂದ ಆಡಲಿಲ್ಲ ಎಂದು ಆರೋಪಿಸಿದ್ದರಂತೆ. ಇದು ಅಶ್ವಿನ್ ಕುರಿತಾಗಿ ಕೊಹ್ಲಿಯ ಆರೋಪ ಎನ್ನಲಾಗಿದೆ.

ಇದಾದ ಬಳಿಕ ಅಶ್ವಿನ್ ಬಿಸಿಸಿಐ ಕಾರ್ಯದರ್ಶಿ ಜಯ್ ಶಾಗೆ ಕೊಹ್ಲಿ ವಿರುದ್ಧ ದೂರು ನೀಡಿದ್ದು, ನನಗೆ ತಂಡದಲ್ಲಿ ಕೊಹ್ಲಿಯಿಂದಾಗಿ ಅಭದ್ರತೆ ಕಾಡುತ್ತಿದೆ ಎಂದಿದ್ದರು ಎನ್ನಲಾಗಿದೆ. ಇದರ ಬೆನ್ನಲ್ಲೇ ಇಂಗ್ಲೆಂಡ್ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಅಶ್ವಿನ್ ರನ್ನು ಬೇಕೆಂದೇ ಕಡೆಗಣಿಸಲಾಗಿತ್ತು.

ಇದರ ನಡುವೆ ಟಿ20 ವಿಶ್ವಕಪ್ ತಂಡದಲ್ಲಿ ಅಶ್ವಿನ್ ಬದಲು ಯಜುವೇಂದ್ರ ಚಾಹಲ್ ಗೆ ಅವಕಾಶ ನೀಡಲು ಕೊಹ್ಲಿ ಆಯ್ಕೆ ಸಮಿತಿಗೆ ಬೇಡಿಕೆಯಿಟ್ಟಿದ್ದರಂತೆ. ಆದರೆ ಬಿಸಿಸಿಐ ಕೊಹ್ಲಿ ಮಾತನ್ನು ತಳ್ಳಿ ಹಾಕಿ ಅಶ್ವಿನ್ ಗೆ ಸ್ಥಾನ ನೀಡಿದೆ. ಇದರಿಂದ ಬೇಸತ್ತ ಕೊಹ್ಲಿ ಟಿ20 ನಾಯಕತ್ವದಿಂದ ಕೆಳಗಿಳಿದಿದ್ದಾರೆ ಎಂಬ ಮಾತಿದೆ. ಇದರ ಬೆನ್ನಲ್ಲೇ ಏಕದಿನ ನಾಯಕತ್ವದಿಂದಲೂ ಕೊಹ್ಲಿಯನ್ನು ಪದಚ್ಯುತಗೊಳಿಸಲು ತಯಾರಿ ನಡೆದಿದೆ ಎನ್ನಲಾಗಿದೆ. ಅಂತೂ ಕೊಹ್ಲಿ ರಾಜೀನಾನಮೆ ಹಿಂದೆ ಅಶ್ವಿನ್ ದೂರೂ ಪ್ರಭಾವ ಬೀರಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ