ಐಪಿಎಲ್ 14: ಧೋನಿ ಬಗ್ಗೆ ಟ್ವೀಟ್ ಮಾಡಿ ಡಿಲೀಟ್ ಮಾಡಿದ ವಿರಾಟ್ ಕೊಹ್ಲಿ!

ಸೋಮವಾರ, 11 ಅಕ್ಟೋಬರ್ 2021 (10:01 IST)
ದುಬೈ: ಐಪಿಎಲ್ 14 ರಲ್ಲಿ ಮೊದಲ ಪ್ಲೇ ಆಫ್ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಸಿಎಸ್ ಕೆ ನಾಯಕ ತನ್ನ ಹಳೆಯ ಫಿನಿಶರ್ ಅವತಾರ ತಾಳಿದ್ದರು. ಅವರ ಭರ್ಜರಿ ಬ್ಯಾಟಿಂಗ್ ನೋಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಖುಷಿಯಿಂದ ಕುಣಿದಾಡಿದ್ದಾರೆ.


ಸಿಎಸ್ ಕೆ ಪಂದ್ಯ ಗೆದ್ದ ಬಳಿಕ ಧೋನಿ ಮತ್ತೆ ಫಾರ್ಮ್ ಗೆ ಮರಳಿದ್ದನ್ನು ಕೊಹ್ಲಿ ಸಂಭ್ರಮದಿಂದ ಟ್ವೀಟ್ ಮಾಡಿದ್ದರು. ಆದರೆ ಈ ಟ್ವೀಟ್ ನಲ್ಲಿ ಒಂದು ಸ್ಪೆಲ್ಲಿಂಗ್ ತಪ್ಪಾಗಿತ್ತು ಎನ್ನುವ ಕಾರಣಕ್ಕೆ ಅದನ್ನು ಡಿಲೀಟ್ ಮಾಡಿ ಮತ್ತೆ ಸರಿಪಡಿಸಿ ಟ್ವೀಟ್ ಮಾಡಿದ್ದಾರೆ.

‘ಕಿಂಗ್ ಈಸ್ ಬ್ಯಾಕ್. ಅತ್ಯಂತ ಶ್ರೇಷ್ಠ ಫಿನಿಶರ್. ಇಂದು ನಾನು ಕೂತಲ್ಲಿಂದ ಎದ್ದು ಕುಣಿಯುವಂತೆ ಮಾಡಿದೆ’ ಎಂದು ಕೊಹ್ಲಿ ಖುಷಿಯಿಂದ ಟ್ವೀಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ