ಐಪಿಎಲ್ 14: ಪ್ಲೇ ಆಫ್ ಪಂದ್ಯದಲ್ಲೂ ರೈನಾ ಆಡುವುದು ಅನುಮಾನ

ಭಾನುವಾರ, 10 ಅಕ್ಟೋಬರ್ 2021 (10:20 IST)
ದುಬೈ: ಐಪಿಎಲ್ 14 ರಲ್ಲಿ ಕಳಪೆ ಫಾರ್ಮ್ ನಿಂದಾಗಿ ಕಳೆದ ಎರಡು ಪಂದ್ಯಗಳಲ್ಲಿ ಆಡುವ ಬಳಗದಿಂದ ಹೊರಗುಳಿದಿದ್ದ ಸಿಎಸ್ ಕೆ ಬ್ಯಾಟ್ಸ್ ಮನ್ ಸುರೇಶ್ ರೈನಾ ಇಂದು ಡೆಲ್ಲಿ ವಿರುದ್ಧ ನಡೆಯಲಿರುವ ಪ್ಲೇ ಆಫ್ ಪಂದ್ಯದಲ್ಲೂ ಆಡುವುದು ಅನುಮಾನವಾಗಿದೆ.


ರೈನಾ ಸ್ಥಾನಕ್ಕೆ ರಾಬಿನ್ ಉತ್ತಪ್ಪಗೆ ಅವಕಾಶ ನೀಡಲಾಗಿತ್ತು. ಆದರೆ ರಾಬಿನ್ ಉತ್ತಪ್ಪ ಕೂಡಾ ತಮಗೆ ಸಿಕ್ಕ ಅವಕಾಶನ್ನು ಬಳಸಿಕೊಳ್ಳಲು ವಿಫಲರಾಗಿದ್ದರು.

ಆದರೆ ಹಾಗಂತ ರೈನಾ ಇಂದಿನ ಪಂದ್ಯವಾಡುವುದು ಅನುಮಾನ. ಯಾಕೆಂದರೆ ಅವರು ಗಾಯಕ್ಕೆ ತುತ್ತಾಗಿದ್ದಾರೆ ಎಂಬ ಸುದ್ದಿಗಳಿವೆ. ಈ ಹಿನ್ನಲೆಯಲ್ಲಿ ಇಂದಿನ ಪ್ಲೇ ಆಫ್ ಪಂದ್ಯದಲ್ಲಿ ಚಿನ್ನ ತಲಾ ಆಡುವುದು ಅನುಮಾನವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ