ಐಪಿಎಲ್ 14: ಮುಂಬೈ ಇಂಡಿಯನ್ಸ್ ಗೆ ಡೆಲ್ಲಿ ಸವಾಲು

ಶನಿವಾರ, 2 ಅಕ್ಟೋಬರ್ 2021 (09:10 IST)
ದುಬೈ: ಐಪಿಎಲ್ 14 ರಲ್ಲಿ ಇಂದು ಎರಡು ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಡೆಲ್ಲಿ ಮತ್ತು ಮುಂಬೈ ಮುಖಾಮುಖಿಯಾಗಲಿದೆ.


ಈ ಪಂದ್ಯ ಎರಡೂ ತಂಡಗಳಿಗೂ ಮಹತ್ವದ್ದು. ಸತತ ಸೋಲುಗಳಿಂದ ಕಂಗೆಟ್ಟಿದ್ದ ಮುಂಬೈ ಕಳೆದ ಪಂದ್ಯದಲ್ಲಿ ಗೆಲುವು ಕಂಡಿತ್ತು. ಇದೀಗ ಮತ್ತೊಂದು ಗೆಲುವಿನ ಮೂಲಕ ಪ್ಲೇ ಆಫ್ ಹಂತದ ಹಾದಿ ಸುಗಮಗೊಳಿಸುವ ತವಕದಲ್ಲಿದೆ. ಮುಂಬೈಗೆ ಸೂರ್ಯಕುಮಾರ್ ಯಾದವ್ ಫಾರ್ಮ್ ನದ್ದೇ ಚಿಂತೆಯಾಗಿದೆ.

ಇನ್ನು, ಡೆಲ್ಲಿ ಸದ್ಯಕ್ಕೆ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಹೆಚ್ಚು ಕಡಿಮೆ ಪ್ಲೇ ಆಫ್ ಹಾದಿ ಗಟ್ಟಿ ಮಾಡಿದೆ. ಆದರೂ ತನ್ನ ಅಗ್ರ ಪಟ್ಟ ಮರಳಿ ಪಡೆಯಲು ಹೋರಾಡಲೇ ಬೇಕಿದೆ. ಇಂದಿನ ಈ ಪಂದ್ಯ ಅಪರಾಹ್ನ 3.30 ಕ್ಕೆ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ