ಐಪಿಎಲ್ 14: ಮುಂಬೈ ಇಂಡಿಯನ್ಸ್ ಗೆ ರಾಜಸ್ಥಾನ್ ಎದುರಾಳಿ

ಗುರುವಾರ, 29 ಏಪ್ರಿಲ್ 2021 (09:28 IST)
ನವದೆಹಲಿ: ಬ್ಯಾಟಿಂಗ್ ವೈಫಲ್ಯದಿಂದಾಗಿ ಸೊರಗಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಗೆ ಇಂದು ರಾಜಸ್ಥಾನ್ ರಾಯಲ್ಸ್ ಎದುರಾಳಿಯಾಗಿದೆ.


ಕಳೆದ ಮೂರು ಪಂದ್ಯಗಳಿಂದ ಸತತವಾಗಿ ಬ್ಯಾಟಿಂಗ್ ವೈಫಲ್ಯಕ್ಕೊಳಗಾಗಿರುವ ರೋಹಿತ್ ಪಡೆಗೆ ಈಗ ಹುಳುಕು ಸರಿಪಡಿಸಿಕೊಂಡು ಮುನ್ನಡೆಯಬೇಕಾದ ಪರಿಸ್ಥಿತಿ. ಇಂದಿನ ಪಂದ್ಯವನ್ನೂ ಸೋತರೆ ಮುಂಬೈಗೆ ಮುಂದಿನ ಹಾದಿ ಕಷ್ಟವಾಗಬಹುದು.

ಅತ್ತ ರಾಜಸ್ಥಾನ್‍ ರಾಯಲ್ಸ್ ನದ್ದೂ ಇದೇ ಕತೆ. ಯುವ ಸಂಜು ಸ್ಯಾಮ್ಸನ್ ನೇತೃತ್ವದ ತಂಡದಲ್ಲಿ ಏನೋ ಮಿಸ್ ಹೊಡೀತಿದೆ ಎಂಬ ಭಾವ. ಗೆಲುವಿನ ಅಂಚಿಗೆ ಬಂದರೂ ಗೆಲುವು ಸಾಧ್ಯವಾಗುತ್ತಿಲ್ಲ. ಈ ಹಣಾಹಣಿಯಲ್ಲಿ ಗೆಲ್ಲುವವರು ಯಾರು ಎಂದು ನೋಡಲು ಇಂದು 3.30 ರಿಂದ ಪಂದ್ಯ ವೀಕ್ಷಿಸಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ