ಐಪಿಎಲ್ 14: ಆರ್ ಸಿಬಿಗೆ ಇಂದು ಕನ್ನಡಿಗರ ಪಂಜಾಬ್ ಎದುರಾಳಿ

ಶುಕ್ರವಾರ, 30 ಏಪ್ರಿಲ್ 2021 (09:34 IST)
ಮುಂಬೈ: ಐಪಿಎಲ್ 14 ರಲ್ಲಿ ಇಂದು ಕನ್ನಡಿಗರ ಕಿಂಗ್ ಪಂಜಾಬ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಗುದ್ದಾಟವಾಗಲಿದೆ.


ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗಾಗಲೇ 6 ಪಂದ್ಯಗಳಿಂದ ಐದನ್ನು ಗೆದ್ದು ಬೀಗುತ್ತಿದೆ. ಬ್ಯಾಟಿಂಗ್ ನಲ್ಲಿ ಎಬಿಡಿ ವಿಲಿಯರ್ಸ್, ವಿರಾಟ್ ಕೊಹ್ಲಿ ಆ ತಂಡದ ಶಕ್ತಿ. ಬೌಲಿಂಗ್ ನಲ್ಲಿ ಮೊಹಮ್ಮದ್ ಸಿರಾಜ್ ಅದ್ಭುತ ಸ್ಪೆಲ್ ಜೊತೆಗೆ ಹರ್ಷಲ್ ಪಟೇಲ್ ತಕ್ಕ ಸಾಥ್ ನೀಡುತ್ತಿದ್ದಾರೆ. ಹೀಗಾಗಿ ಮೇಲ್ನೋಟಕ್ಕೆ ಆರ್ ಸಿಬಿಯೇ ಫೇವರಿಟ್ ಎನಿಸುತ್ತದೆ.

ಆದರೆ ಪಂಜಾಬ್ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಕೆಎಲ್ ರಾಹುಲ್, ಗೇಲ್ ಸಿಡಿದರೆ ದೊಡ್ಡ ಮೊತ್ತ ಗ್ಯಾರಂಟಿ. ಅದರಲ್ಲೂ ಪಂಜಾಬ್ ಈ ಮೊದಲೂ ಆರ್ ಸಿಬಿಯನ್ನು ಸೋಲಿಸಿದ ಇತಿಹಾಸ ಹೊಂದಿದೆ. ಹೀಗಾಗಿ ಈ ಪಂದ್ಯದಲ್ಲಿ ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಬಹುದು. ಇಂದಿನ ಪಂದ್ಯದ ಸಮಯ ಸಂಜೆ 7.30.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ