ಐಪಿಎಲ್ 2022: ರೋಚಕ ಗೆಲುವು ಕಂಡ ಲಕ್ನೋ
ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ನಾಯಕ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಅಬ್ಬರದ ಬ್ಯಾಟಿಂಗ್ ನಿಂದಾಗಿ ವಿಕೆಟ್ ನಷ್ಟವಿಲ್ಲದೇ 20 ಓವರ್ ಗಳಲ್ಲಿ 210 ರನ್ ಗಳ ಬೃಹತ್ ಮೊತ್ತ ಪೇರಿಸಿತು. ರಾಹುಲ್ 51 ಎಸೆತಗಳಿಂದ 68 ರನ್ ಗಳಿಸಿದರೆ ಕ್ವಿಂಟನ್ ಡಿ ಕಾಕ್ 70 ಎಸೆತಗಳಿಂದ ಭರ್ಜರಿ 140 ರನ್ ಗಳಿಸಿ ಅಬ್ಬರಿಸಿದರು.
ಈ ಬೃಹತ್ ಮೊತ್ತವನ್ನು ಕೆಕೆಆರ್ ಕೂಡಾ ಉತ್ತಮವಾಗಿ ಚೇಸ್ ಮಾಡುತ್ತಿತ್ತು. ಕೊನೆಯಲ್ಲಿ ಸುನಿಲ್ ನಾರಾಯಣ್ 7 ಎಸೆತಗಳಿಂದ 21 ರನ್ ಚಚ್ಚಿ ಎದುರಾಳಿಗಳಿಗೆ ನಡುಕ ಹುಟ್ಟಿಸಿದರು. ಕೊನೆಯ ಓವರ್ ನಲ್ಲಿ ಕೊನೆಯ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಕಬಳಿಸಿದ ಲಕ್ನೋ ಬೌಲರ್ ಸ್ಟಾಯ್ನಿಸ್ ತಮ್ಮ ತಂಡದ ಜಯ ಖಚಿತಪಡಿಸಿದರು. ಇದರೊಂದಿಗೆ ಕೆಕೆಆರ್ ಪ್ಲೇ ಆಫ್ ನಿಂದ ಹೊರಬಿತ್ತು.