ಐಪಿಎಲ್ 2022: ರೋಚಕವಾಗಿ ಗೆದ್ದು ಪ್ಲೇ ಆಫ್ ಕನಸು ಜೀವಂತವಾಗಿರಿಸಿದ ಹೈದರಾಬಾದ್

ಬುಧವಾರ, 18 ಮೇ 2022 (08:30 IST)
ಮುಂಬೈ: ಐಪಿಎಲ್ 2022 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರೋಚಕವಾಗಿ 3 ರನ್ ಗಳ ಗೆಲುವು ಸಾಧಿಸಿದ ಸನ್ ರೈಸರ್ಸ್ ಹೈದರಾಬಾದ್ ಪ್ಲೇ ಆಫ್ ಕನಸು ಜೀವಂತವಾಗಿರಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿತು. ಪ್ರಿಯಂ ಗಾರ್ಗ್ 42 ರನ್ ಗಳಿಸಿದರೆ 44 ಎಸೆತಗಳಿಂದ 76 ರನ್ ಸಿಡಿಸಿದ ರಾಹುಲ್ ತ್ರಿಪಾಟಿ ತಂಡದ ಮೊತ್ತ ಉಬ್ಬಲು ನೆರವಾದರು. ಕೊನೆಯಲ್ಲಿ ನಿಕಲಸ್ ಪೂರನ್ 3 ಸಿಕ್ಸರ್ ಸಹಿತ 38 ರನ್ ಚಚ್ಚಿದರು. ರಮಣ್ ದೀಪ್ ಸಿಂಗ್ 3 ವಿಕೆಟ್ ಕಬಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಮುಂಬೈ ಆರಂಭ ಉತ್ತಮವಾಗಿತ್ತು. ರೋಹಿತ್ ಶರ್ಮಾ 48, ಇಶಾನ್ ಕಿಶನ್ 43 ರನ್ ಗಳಿಸಿದರು. ಆದರೆ ಬಳಿಕ ಬಂದ ಇಬ್ಬರು ಬ್ಯಾಟಿಗರು ರನ್ ಗಳಿಸಲು ವಿಫಲರಾದರು. ಕೊನೆಯಲ್ಲಿ ಟಿಮ್ ಡೇವಿಡ್ 18 ಎಸೆತಗಳಿಂದ 46 ರನ್ ಚಚ್ಚಿ ಮುಂಬೈಗೆ ಗೆಲುವು ತಂದೇ ಕೊಟ್ಟರು ಎನ್ನುವಂತಾಗಿತ್ತು. ಆದರೆ ಕೊನೆಯ ಓವರ್ ನಲ್ಲಿ ಬಿಗುವಿನ ದಾಳಿಯಿಂದಾಗಿ ಮುಂಬೈ ಸೋಲೊಪ್ಪಿತು. ಉಮ್ರಾನ್ ಮಲಿಕ್ 3 ವಿಕೆಟ್ ತಮ್ಮದಾಗಿಸಿಕೊಂಡರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ