ಐಪಿಎಲ್ ಹರಾಜು: ಇಂಗ್ಲೆಂಡ್ ವೇಗಿ ಟೈಮಲ್ ಮಿಲ್ಸ್‌ಗೆ ಗರಿಷ್ಠ ಮೊತ್ತ
ಸೋಮವಾರ, 20 ಫೆಬ್ರವರಿ 2017 (16:53 IST)
ಎಡಗೈ ಬೌಲರ್, ಬಲಗೈ ಬ್ಯಾಟ್ಸ್ ಮನ್ ಆಗಿರುವ ಟೈಮಲ್ ಮಿಲ್ಸ್‌ಗೆ ಐಪಿಎಲ್ ಹರಾಜು ಶುಕ್ರದೆಸೆ ತಂದಿದ್ದು ಬರೋಬ್ಬರಿ 12 ಕೋಟಿ ರೂಪಾಯಿಗಳಿಗೆ ಮಾರಾಟವಾಗಿ ಅಚ್ಚರಿ ಮೂಡಿಸಿದ್ದಾರೆ.
ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ 12 ಕೋಟಿ ರೂಪಾಯಿಗಳನ್ನು ನೀಡಿ ಟೈಮಲ್ ಮಿಲ್ಸ್‌ರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಟೈಮಲ್ ಮಿಲ್ಸ್ ಖರೀದಿಗೆ ದೆಹಲಿ, ಪಂಜಾಬ್ ಮುಂಬೈ, ಕೋಲ್ಕತಾ ತಂಡಗಳು ಕೂಡಾಗಳು ತೀವ್ರ ಆಸಕ್ತಿ ತೋರಿದ್ದವು. ಆದರೆ, ಅತ್ಯಧಿಕ ಬಿಡ್ ಸಲ್ಲಿಸಿದ ಆರ್‌ಸಿಬಿ 12 ಕೋಟಿ ರೂಪಾಯಿಗಳನ್ನು ನೀಡಿ ಖರೀದಿಸಿದೆ.
ಟೈಮಲ್ ಮಿಲ್ಸ್ ಇಲ್ಲಿಯವರೆಗೆ ನಾಲ್ಕು ಬಾರಿ ಟಿ-20 ಪಂದ್ಯಾವಳಿಗಳಲ್ಲಿ ಪಾಲ್ಗೊಂಡಿದ್ದಾರೆ. ಅತ್ಯಧಿಕ ವೇಗದ ಬೌಲರ್ ಎನ್ನುವ ಕಾರಣಕ್ಕೆ ಐಪಿಎಲ್ ತಂಡಗಳು ಮಿಲ್ಸ್ ಖರೀದಿಗೆ ದುಂಬಾಲು ಬಿದ್ದಿದ್ದವು ಎನ್ನಲಾಗಿದೆ.
ಆಸೀಸ್ ತಂಡದ ಮೈಕಲ್ ಸ್ಟಾರ್ಕ್ ಐಪಿಎಲ್‌ನಿಂದ ದೂರವಿರುವುದಾಗಿ ಘೋಷಿಸಿದ ಹಿನ್ನೆಲೆಯಲ್ಲಿ ಟೈಮಲ್ ಮಿಲ್ಸ್‌ಗೆ ಹೆಚ್ಚಿನ ಬೆಲೆ ಬಂದಿದೆ ಎಂದು ಐಪಿಎಲ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.