ಮುಂಬೈ: ಕೊರೋನಾ ಕಾರಣದಿಂದ ಐಪಿಎಲ್ ಮುಂದೂಡಿಕೆಯಾಗಿರುವುದರಿಂದ ಭಾರತದಲ್ಲಿರುವ ವಿದೇಶೀ ಆಟಗಾರರಿಗೆ ತವರಿಗೆ ತೆರಳುವ ಸಂಕಷ್ಟ ಎದುರಾಗಿದೆ.
ವಿದೇಶ ಪ್ರವಾಸಕ್ಕೆ ನಿರ್ಬಂಧ ಇರುವುದರಿಂದ ಕ್ರಿಕೆಟಿಗರು ತವರಿಗೆ ಮರಳುವುದು ಕಷ್ಟವಾಗಿದೆ. ಈ ನಡುವೆ ಮೇ 5 ರಿಂದ ವಿದೇಶೀ ಆಟಗಾರರು ತವರಿಗೆ ತೆರಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.
ಇದೀಗ ಆಯಾ ಫ್ರಾಂಚೈಸಿಗಳೇ ತಮ್ಮ ವಿದೇಶೀ ಆಟಗಾರರನ್ನು ತವರಿಗೆ ಕಳುಹಿಸುವ ವ್ಯವಸ್ಥೆ ಮಾಡಲಿದ್ದಾರೆ. ಈ ನಡುವೆ ಆಸೀಸ್ ಆಟಗಾರರಿಗೆ ಅಲ್ಲಿಗೆ ತೆರಳಲು ನಿರ್ಬಂಧವಿರುವುದರಿಂದ ಅವರು ಮೇ 15 ರವರೆಗೆ ಭಾರತದಲ್ಲೇ ಉಳಿಯುವ ಸಾಧ‍್ಯತೆಯಿದೆ.