ಮುಂದಿನ ಪಂದ್ಯವಾಡಲ್ಲ! ಬಿಸಿಸಿಐಗೆ ತಿಳಿಸಿದ ಸಿಎಸ್ ಕೆ

ಮಂಗಳವಾರ, 4 ಮೇ 2021 (10:08 IST)
ಮುಂಬೈ: ಕೊರೋನಾ ಪ್ರಕರಣಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯಬೇಕಿದ್ದ ಐಪಿಎಲ್ ಪಂದ್ಯವಾಡದೇ ಇರಲು ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿರ್ಧರಿಸಿದೆ.


ಈ ಬಗ್ಗೆ ಈಗಾಗಲೇ ಬಿಸಿಸಿಐಗೆ ಮಾಹಿತಿ ನೀಡಿದೆ ಎನ್ನಲಾಗಿದೆ. ಚೆನ್ನೈ ತಂಡದಲ್ಲೂ ಇಬ್ಬರಲ್ಲಿ ಕೊರೋನಾ ಕಾಣಿಸಿಕೊಂಡಿತ್ತು. ಆದರೆ ಕ್ರಿಕೆಟಿಗರು ಸುರಕ್ಷಿತವಾಗಿದ್ದಾರೆ.

ಹೀಗಾಗಿ ದೆಹಲಿಯಲ್ಲಿ ನಡೆಯಬೇಕಿದ್ದ ಪಂದ್ಯವನ್ನು ಆಡದೇ ಇರಲು ಸಿಎಸ್ ಕೆ ತೀರ್ಮಾನಿಸಿದೆ ಎಂದು ವರದಿಗಳು ಹೇಳಿವೆ. ಈ ಪಂದ್ಯವನ್ನು ಮುಂದೂಡುವಂತೆ ಬಿಸಿಸಿಐಗೆ ಮನವಿ ಮಾಡಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ