ಇಂಗ್ಲೆಂಡ್ ನಿಂದ ಕ್ರಿಕೆಟಿಗರ ಕರೆತರಲು ಐಪಿಎಲ್ ಫ್ರಾಂಚೈಸಿಗಳ ರಾಜ ಮರ್ಯಾದೆ

ಭಾನುವಾರ, 12 ಸೆಪ್ಟಂಬರ್ 2021 (08:37 IST)
ಲಂಡನ್: ಯುಎಇನಲ್ಲಿ ನಡೆಯಲಿರುವ ಐಪಿಎಲ್ 14 ರ ಪಂದ್ಯದಲ್ಲಿ ಭಾಗಿಯಾಗಲು ತಮ್ಮ ತಮ್ಮ ತಂಡದ ಆಟಗಾರರನ್ನು ಐಪಿಎಲ್ ಫ್ರಾಂಚೈಸಿಗಳು ರಾಜಮರ್ಯಾದೆಯಿಂದ ಕರೆತರಲಿದೆ.


ಟೀಂ ಇಂಡಿಯಾದ ಸ್ಟಾರ್ ಆಟಗಾರರು ತಮ್ಮ ತಂಡ ಕೂಡಿಕೊಳ್ಳಲು ಆಯಾ ಐಪಿಎಲ್ ಫ್ರಾಂಚೈಸಿಗಳೇ ವಿಶೇಷ ವಿಮಾನ ವ್ಯವಸ್ಥೆ ಮಾಡಿದೆ.

ಈ ಪೈಕಿ ಆರ್ ಸಿಬಿ ನಾಯಕ ಕೊಹ್ಲಿ, ಮೊಹಮ್ಮದ್ ಸಿರಾಜ್ ಸೇರಿದಂತೆ ತನ್ನ ತಂಡದ ಆಟಗಾರರಿಗೆ ಚಾರ್ಟೆಡ್ ವಿಮಾನ ವ್ಯವಸ್ಥೆ ಮಾಡಿದೆ. ಇನ್ನು, ಮುಂಬೈ ಇಂಡಿಯನ್ಸ್ ಕೂಡಾ ಈಗಾಗಲೇ ತನ್ನ ಆಟಗಾರರನ್ನು ವಿಶೇಷ ವಿಮಾನ ಮೂಲಕ  ಅಬುದಾಬಿಗೆ ಕರೆಸಿಕೊಂಡಿದೆ. ಇದಲ್ಲದೆ, ಪಂಜಾಬ್ ತಂಡ ನಾಯಕ ಕೆಎಲ್ ರಾಹುಲ್, ಮೊಹಮ್ಮದ್ ಶಮಿ ಸೇರಿದಂತೆ ತನ್ನ ತಂಡದ ಆಟಗಾರರಿಗೆ ಕಮರ್ಷಿಯಲ್ ವಿಮಾನದಲ್ಲಿ ವ್ಯವಸ್ಥೆ ಮಾಡಿದೆ. ಚೆನ್ನೈ ಸೂಪರ್ ಕಿಂಗ್ಸ್ ಕೂಡಾ ಇದೇ ದಾರಿ ಹಿಡಿದಿದೆ. ಅಂತೂ ಇಂಗ್ಲೆಂಡ್ ನಿಂದ ಐಪಿಎಲ್ ಗಾಗಿ ಬರಲಿರುವ ಟೀಂ ಇಂಡಿಯಾ ಆಟಗಾರರಿಗೆ ಆಯಾ ತಂಡಗಳು ಭರ್ಜರಿ ವ್ಯವಸ್ಥೆಯನ್ನೇ ಮಾಡಿಕೊಂಡಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ