ಐಪಿಎಲ್ 13 ರ ಪ್ಲ್ಯಾನ್ ಮಾಡಲು ಆಗಸ್ಟ್ 1 ಕ್ಕೆ ಬಿಸಿಸಿಐ ಮಹತ್ವದ ಸಭೆ

ಮಂಗಳವಾರ, 28 ಜುಲೈ 2020 (12:16 IST)
ಮುಂಬೈ: ಐಪಿಎಲ್ 13 ರನ್ನು ಆಯೋಜಿಸುವ ಬಗ್ಗೆ ಬಿಸಿಸಿಐ ತಯಾರಿಯೇನೋ ನಡೆಸುತ್ತಿದೆ. ಆದರೆ ವೇಳಾಪಟ್ಟಿ ಇನ್ನೂ ತಯಾರಾಗಿಲ್ಲ. ಇದರ ಬಗ್ಗೆ ಇದೀಗ ಬಿಸಿಸಿಐ ಸಭೆ ಸೇರುತ್ತಿದ್ದು, ತೀರ್ಮಾನ ನಡೆಸಲಿದೆ.

 

ಆಗಸ್ಟ್ 1 ರಂದು ಐಪಿಎಲ್ ಆಡಳಿತ ಮಂಡಳಿ ಸಭೆ ನಡೆಯಲಿದ್ದು, ವೇಳಾಪಟ್ಟಿ ಸೇರಿದಂತೆ ಹಲವು ವಿಚಾರಗಳು ಸಭೆಯಲ್ಲಿ ತೀರ್ಮಾನವಾಗಲಿದೆ.

ಆಟಗಾರರ ಸಾಗಾಟ, ಯುಎಇನಲ್ಲಿ ನಡೆಸಬೇಕಾಗಿರುವ ತಯಾರಿಗಳ ಕುರಿತಂತೆ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ