ಐಪಿಎಲ್ ಪಂದ್ಯದ ವೇಳಾಪಟ್ಟಿ ಬಹಿರಂಗ: ಮೊದಲ ಪಂದ್ಯ ಯಾರ ನಡುವೆ ಗೊತ್ತಾ?

ಮಂಗಳವಾರ, 28 ಜನವರಿ 2020 (09:39 IST)
ಮುಂಬೈ: ಈ ಬಾರಿಯ ಐಪಿಎಲ್ ಪಂದ್ಯ ಆರಂಭವಾಗುವ ದಿನಾಂಕ ಮತ್ತು ಫೈನಲ್ ನಡೆಯಲಿರುವ ಸ್ಥಳ, ದಿನಾಂಕವನ್ನು ಬಿಸಿಸಿಐ ಅಧ‍್ಯಕ್ಷ ಸೌರವ್ ಗಂಗೂಲಿ ಬಹಿರಂಗಗೊಳಿಸಿದ್ದಾರೆ.


ಸಂಪೂರ್ಣ ವೇಳಾಪಟ್ಟಿ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ. ಆದರೆ ಮಾರ್ಚ್ 29 ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದು, ಫೈನಲ್ ಪಂದ್ಯ ಮೇ 24 ರಂದು ಇದೇ ಮೈದಾನದಲ್ಲಿ ನಡೆಯಲಿದೆ.

ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೆಣಸಲಿದೆ. ಕಳೆದ ಬಾರಿಯಂತೆ ಈ ಬಾರಿಯೂ ರಾತ್ರಿ 8 ಗಂಟೆಗೇ ಪಂದ್ಯಾರಂಭವಾಗಲಿದೆ. ನಿನ್ನೆ ನಡೆದ ಐಪಿಎಲ್ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ