ಭಾರತದಲ್ಲಿ ಆಡಲ್ಲ ಎಂದು ಉಲ್ಟಾ ಹೊಡೆದ ಪಾಕಿಸ್ತಾನ ಕ್ರಿಕೆಟ್ ಮಂಡಳಿ

ಸೋಮವಾರ, 27 ಜನವರಿ 2020 (08:57 IST)
ಇಸ್ಲಾಮಾಬಾದ್: ಏಷ್ಯಾ ಕಪ್ ಕ್ರಿಕೆಟ್ ಪಾಕಿಸ್ತಾನದಲ್ಲೇ ಆಯೋಜಿಸುತ್ತೇವೆ. ಈ ಕ್ರೀಡಾ ಕೂಟಕ್ಕೆ ಭಾರತ ಬರದೇ ಹೋದರೆ ನಾವೂ ಅಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಬಹಿಷ್ಕರಿಸುತ್ತೇವೆ ಎಂದಿದ್ದ ಪಾಕ್ ಕ್ರಿಕೆಟ್ ಮಂಡಳಿ ಈಗ ಉಲ್ಟಾ ಹೊಡೆದಿದೆ.


ನಮ್ಮ ಮಾತನ್ನು ಬೇರೆಯೇ ರೀತಿಯಲ್ಲಿ ಅರ್ಥೈಸಲಾಗಿದೆ. ನಾವು ಹೇಳಿದ ಉದ್ದೇಶ ಅದಲ್ಲ. ಒಂದು ವೇಳೆ ಭಾರತ ತಟಸ್ಥ ಸ್ಥಳದಲ್ಲಿ ಪಂದ್ಯ ನಡೆಸಲು ಬಯಸಿದರೆ ಏಷ್ಯಾ ಕ್ರಿಕೆಟ್ ಸಮಿತಿ ಈ ಬಗ್ಗೆ ಗಮನಹರಿಸಬೇಕು ಎಂದು ಪಿಸಿಬಿಯ ವಾಸಿಂ ಖಾನ್ ಹೇಳಿದ್ದಾರೆ.

ಹಾಗಿದ್ದರೆ ನೀವು ಭಾರತದಲ್ಲಿ ನಡೆಯುವಟಿ20 ವಿಶ್ವಕಪ್ ಬಹಿಷ್ಕರಿಸುತ್ತೀರಾ ಎಂದಿದ್ದಕ್ಕೆ ಉತ್ತರಿಸಿರುವ ಖಾನ್ ‘ನನ್ನ ಮಾತಿನ ಅರ್ಥ ಅದಲ್ಲ. ನಾವು ಭಾರತಕ್ಕೆ ಬರಲು ಭದ್ರತೆ ಮತ್ತು ವೀಸಾ ಸಮಸ್ಯೆಯಾಗಬಹುದು. ಇದಕ್ಕಾಗಿ ಹೀಗೆ ಹೇಳಿದೆ’ ಎಂದು ಬೇರೆ ರಾಗ ಹಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ