ಧೋನಿ ಬಳಿಕ ಸಿಎಸ್ ಕೆ ನಾಯಕತ್ವ ಇವರದ್ದೇ!

ಬುಧವಾರ, 21 ಏಪ್ರಿಲ್ 2021 (09:59 IST)
ಚೆನ್ನೈ: ಐಪಿಎಲ್ ನ ಚೆನ್ನೈ ಸೂಪರ್ ಕಿಂಗ್ಸ್ ತಂಡವೆಂದರೆ ಧೋನಿ ತಂಡವೆಂದೇ ಅನ್ವರ್ಥ ನಾಮವಿದೆ. ಆದರೂ ಒಂದಲ್ಲ ಒಂದು ದಿನ ಧೋನಿ ನಿವೃತ್ತಿಯಾಗಲೇಬೇಕು.


ಧೋನಿ ನಿವೃತ್ತಿ ಬಳಿಕ ಚೆoನ್ನೈ ತಂಡಕ್ಕೆ ನಾಯಕ ಯಾರಾಗಬಹುದು? ಈ ಬಗ್ಗೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಆಲ್ ರೌಂಡರ್ ರವೀಂದ್ರ ಜಡೇಜಾ ಧೋನಿ ನಂತರ ಸಿಎಸ್ ಕೆ ತಂಡವನ್ನು ಮುನ್ನಡೆಸಬಹುದು’ ಎಂದು ವಾನ್ ಹೇಳಿಕೊಂಡಿದ್ದಾರೆ. ‘ಇನ್ನು, 2-3 ವರ್ಷ ಕಳೆದರೆ ಧೋನಿ ನಿವೃತ್ತಿಯಾಗಬಹುದು. ಆಗ ಹೊಸ ನಾಯಕನೊಂದಿಗೆ ತಂಡ ಕಟ್ಟಬೇಕು. ಇದಕ್ಕೆ ಜಡೇಜಾ ಸೂಕ್ತ’ ಎಂದು ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ