ಐಪಿಎಲ್ 14: ಧೋನಿಗೆ 12 ಲಕ್ಷ ರೂ. ದಂಡ

ಭಾನುವಾರ, 11 ಏಪ್ರಿಲ್ 2021 (10:37 IST)
ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ನಿನ್ನೆಯ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿಗೆ 12 ಲಕ್ಷ ರೂ. ದಂಡದ ಬರೆ ಸಿಕ್ಕಿದೆ.


ನಿನ್ನೆಯ ಪಂದ್ಯದಲ್ಲಿ ಸೋಲಿನ ಜೊತೆಗೆ ಸಿಎಸ್ ಕೆ ನಾಯಕನಿಗೆ ನಿಧಾನಗತಿಯ ಓವರ್ ಎಸೆದಿದ್ದಕ್ಕೆ ಐಪಿಎಲ್ ನಿಯಮಗಳನುಸಾರ 12 ಲಕ್ಷ ರೂ. ದಂಡ ವಿಧಿಸಲಾಗಿದೆ.

ನಿನ್ನೆಯ ಪಂದ್ಯವನ್ನು ಸಿಎಸ್ ಕೆ 7 ವಿಕೆಟ್ ಗಳಿಂದ ಸೋತಿತ್ತು. ಪ್ರತಿ ಗಂಟೆಗೆ 14.1 ಓವರ್ ನಷ್ಟು ಬೌಲಿಂಗ್ ಮಾಡಬೇಕೆಂಬ ನಿಯಮವಿದೆ. ಆದರೆ ಸಿಎಸ್ ಕೆ ಕಡಿಮೆ ಓವರ್ ಮಾಡಿದ ಕಾರಣ ತಂಡದ ನಾಯಕನಿಗೆ ದಂಡದ ಶಿಕ್ಷೆ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ