ಐಪಿಎಲ್ 14: ನಿಷೇಧದ ಭೀತಿಯಲ್ಲಿ ಧೋನಿ

ಶನಿವಾರ, 17 ಏಪ್ರಿಲ್ 2021 (10:09 IST)
ಮುಂಬೈ: ಐಪಿಎಲ್ 14 ರಲ್ಲಿ ಕಳಪೆ ಪ್ರದರ್ಶನದ ಜೊತೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೊಂದು ಭೀತಿ ಎದುರಾಗಿದೆ. ವಿಶೇಷವಾಗಿ ಧೋನಿ ಒತ್ತಡದಲ್ಲಿದ್ದಾರೆ.


ಡೆಲ್ಲಿ ವಿರುದ್ಧದ ಮೊದಲ ಪಂದ್ಯದಲ್ಲಿ ಧೋನಿ ಪಡೆ ಸೋಲನುಭವಿಸಿತ್ತು. ಅಲ್ಲದೆ ಧೋನಿ ಎರಡನೇ ಎಸೆತಕ್ಕೇ ಶೂನ್ಯಕ್ಕೆ ಔಟಾಗಿದ್ದರು. ಇದರ ಜೊತೆಗೆ ಆ ಪಂದ್ಯದಲ್ಲಿ ನಿಗದಿತ ಸಮಯದಲ್ಲಿ ಓವರ್ ಪೂರೈಸದೇ ಇದ್ದಿದ್ದಕ್ಕೆ ಧೋನಿ 12 ಲಕ್ಷ ರೂ. ದಂಡ ಪಾವತಿ ಮಾಡಬೇಕಾಗಿ ಬಂದಿತ್ತು.

ಮುಂದಿನ ಪಂದ್ಯದಲ್ಲೂ ಧೋನಿ ಇದೇ ತಪ್ಪು ಮುಂದುವರಿಸಿದರೆ ಒಂದು ಪಂದ್ಯದ ನಿಷೇಧದ ಶಿಕ್ಷೆ ಅನುಭವಿಸಬೇಕಾಗಬಹುದು. ಬಿಸಿಸಿಐ ನಿಯಮಗಳ ಪ್ರಕಾರ ಎರಡನೇ ಬಾರಿಯೂ ಅದೇ ತಪ್ಪು ಮಾಡಿದರೆ ತಂಡದ ನಾಯಕನಿಗೆ ನಿಷೇಧದ ಶಿಕ್ಷೆ ನೀಡಬಹುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ