ಐಪಿಎಲ್ 2022: ಎಲ್ಲರ ಮೆಚ್ಚುಗೆಗೆ ಪಾತ್ರವಾಯ್ತು ಜೋಸ್ ಬಟ್ಲರ್ ರ ಈ ನಡತೆ!
ಜಿಮ್ಮಿ ನೀಶಾಮ್ ಬೌಲಿಂಗ್ ನಲ್ಲಿ ಹಾರ್ದಿಕ್ ಪಾಂಡ್ಯ ಬ್ಯಾಟ್ ಬೀಸಿದ್ದರು. ಪರಿಣಾಮ ಬಾಲ್ ಬೌಂಡರಿ ಗೆರೆಯತ್ತ ಸಾಗುತ್ತಿತ್ತು. ಈ ವೇಳೆ ಜೋಸ್ ಬಟ್ಲರ್ ಚೆಂಡು ತಡೆದಿದ್ದರು.
ಆದರೆ ಹಾಗೆ ಮಾಡುವಾಗ ಅವರ ಕಾಲು ಕೊಂಚ ಬೌಂಡರಿ ಗೆರೆಯನ್ನು ಸ್ಪರ್ಶಿಸಿತ್ತು. ಹೀಗಾಗಿ ತಕ್ಷಣವೇ ಅಂಪಾಯರ್ ಕಡೆಗೆ ತಾನು ಬೌಂಡರಿ ಗೆರೆ ಸ್ಪರ್ಶಿಸಿರುವುದಾಗಿ ಪ್ರಾಮಾಣಿಕವಾಗಿ ಬಟ್ಲರ್ ಸಿಗ್ನಲ್ ಮಾಡಿದರು. ಇದನ್ನು ನೋಡಿದ ಪ್ರೇಕ್ಷಕರು ಅವರ ಕ್ರೀಡಾ ಸ್ಪೂರ್ತಿಯನ್ನು ಮೆಚ್ಚಿಕೊಂಡರು.