ಐಪಿಎಲ್ 2022: ಮತ್ತೆ ಗೆಲುವಿನ ಹಳಿಗೆ ಮರಳಿದ ಗುಜರಾತ್

ಶುಕ್ರವಾರ, 15 ಏಪ್ರಿಲ್ 2022 (08:30 IST)
ಮುಂಬೈ: ಐಪಿಎಲ್ 2022 ರಲ್ಲಿ ಗುಜರಾತ್ ಟೈಟನ್ಸ್ ಮತ್ತೆ ಗೆಲುವಿನ ಹಳಿಗೆ ಬಂದಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯವನ್ನು 37 ರನ್ ಗಳಿಂದ ಗೆದ್ದುಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತ್ತು. ಭರ್ಜರಿ ಫಾರ್ಮ್ ನಲ್ಲಿರುವ ನಾಯಕ ಹಾರ್ದಿಕ್ ಪಾಂಡ್ಯ ಅಜೇಯ 87 ರನ್ ಗಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ರಾಜಸ್ಥಾನ್  20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಲಷ್ಟೇ ಶಕ್ತವಾಯಿತು. ಜೋಸ್ ಬಟ್ಲರ್ 54 ರನ್ ಗಳಿಸಿದರೆ ಶಿಮ್ರಾನ್ ಹೆಟ್ಮೈರ್ 29 ರನ್ ಗಳಿಸಿದರು. ಉಳಿದವರಿಂದ ಹೇಳಿಕೊಳ್ಳುವ ಪ್ರದರ್ಶನ ಬರಲಿಲ್ಲ. ಪರಿಣಾಮ ರಾಜಸ್ಥಾನ್ 37 ರನ್ ಗಳ ಸೋಲು ಅನುಭವಿಸಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ