ಕಿಂಗ್ಸ್ ಪಂಜಾಬ್ ಜೆರ್ಸಿ ನೋಡಿ ಆರ್ ಸಿಬಿ ಫ್ಯಾನ್ಸ್ ಟ್ರೋಲ್ ಮಾಡಿದ್ದೇಕೆ?

ಬುಧವಾರ, 31 ಮಾರ್ಚ್ 2021 (09:28 IST)
ಮೊಹಾಲಿ: ಕಿಂಗ್ಸ್ ಪಂಜಾಬ್ ತಂಡ ಈ ವರ್ಷದ ಐಪಿಎಲ್ ಆವೃತ್ತಿಗೆ ಹೊಸ ವಿನ್ಯಾಸದ ಜೆರ್ಸಿಯನ್ನು ಅನಾವರಣಗೊಳಿಸಿದೆ. ಆದರೆ ಪಂಜಾಬ್ ತಂಡದ ಈ ಜರ್ಸಿ ಈಗ ಟ್ರೋಲ್ ಗೊಳಗಾಗಿದೆ.


ಪಂಜಾಬ್ ತಂಡ ಹೊಸ ವಿನ್ಯಾಸದ ಟಿ ಶರ್ಟ್ ಹೊರಬಿಡುತ್ತಿದ್ದಂತೇ ಟ್ವಿಟರಿಗರು ಇದು ಆರ್ ಸಿಬಿ ಜೆರ್ಸಿಯನ್ನು ಹೋಲುವಂತಿದೆ ಎಂದು ಕಾಲೆಳೆದಿದ್ದಾರೆ.

ಹಿಂದಿನ ಆರ್ ಸಿಬಿ ಜೆರ್ಸಿಯ ವಿನ್ಯಾಸವೂ ಹೆಚ್ಚು ಕಡಮೆ ಇದೇ ರೀತಿ ಇತ್ತು. ಹೀಗಾಗಿ ಆ ಜೆರ್ಸಿ ತೊಟ್ಟಿರುವ ವಿರಾಟ್ ಕೊಹ್ಲಿಯ ಫೋಟೋವನ್ನು ಶೇರ್ ಮಾಡಿರುವ ಟ್ವಿಟರಿಗರು ಇದು ಆರ್ ಸಿಬಿಯ ಹಳೆಯ ಜೆರ್ಸಿ. ಇದರಲ್ಲಿ ಕರ್ನಾಟಕ ಬಾವುಟದ ಬಣ್ಣವೂ ಇದೆ ಎಂದು ಕಾಲೆಳೆದಿದ್ದಾರೆ.

ಮೊದಲೇ ಪಂಜಾಬ್ ತಂಡಕ್ಕೆ ಕನ್ನಡಿಗ ಕೆಎಲ್ ರಾಹುಲ್ ನಾಯಕನಾದರೆ ಕನ್ನಡಿಗ ಅನಿಲ್ ಕುಂಬ್ಳೆ ಕೋಚ್. ಈಗ ಜೆರ್ಸಿಯೂ ಹಳೆಯ ಆರ್ ಸಿಬಿ ಮಾದರಿಯಲ್ಲಿರುವುದು ನೋಡಿ ಇದು ಪಂಜಾಬ್ ತಂಡ ಹೌದೋ ಅಲ್ಲವೋ ಎಂಬ ಅನುಮಾನ ಮೂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ