ಮತ್ತೆ ಮಿಂಚಿದ ಕೊಹ್ಲಿ ಅರ್ಧಶತಕ: ಪ್ಲೇ ಆಫ್ ಪ್ರವೇಶಿಸಿದ ರಾಯಲ್ ಚಾಲೆಂಜರ್ಸ್
ಸೋಮವಾರ, 23 ಮೇ 2016 (11:43 IST)
ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ರಾಯ್‌ಪುರದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಜಯಗಳಿಸುವ ಮೂಲಕ ಪ್ಲೇಆಫ್ ಕನಸು ನನಸಾಗಿದೆ. ವಿರಾಟ್ ಕೊಹ್ಲಿ ಅವರ ಶ್ರಮದ ಫಲವಾಗಿ 54 ರನ್ ಜವಾಬ್ದಾರಿ ಆಟದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದೆ.
ಆರ್‌ಸಿಬಿ ಬೌಲರುಗಳ ಪ್ರಯತ್ನವನ್ನೂ ನಾವು ಕಡೆಗಣಿಸಲಾವುದಿಲ್ಲ. ಆರ್‌ಸಿಬಿ ಬೌಲರುಗಳು ಡೇರ್ ಡೆವಿಲ್ಸ್ ತಂಡವನ್ನು 138ರ ಸಾಧಾರಣ ಮೊತ್ತಕ್ಕೆ ಔಟ್ ಮಾಡಿತು. ಯಜುವೇಂದ್ರ ಚಾಹಲ್ 32 ರನ್‌ಗೆ 3 ವಿಕೆಟ್ ಕಬಳಿಸಿದರು ಮತ್ತು ಕ್ರಿಸ್ ಗೇಲ್ 2 ವಿಕೆಟ್‌ಗೆ 11 ರನ್ ನೀಡಿದರು.
ಡೇರ್ ಡೇವಿಲ್ಸ್ ಪರ ಕ್ವಿಂಟನ್ ಡಿ ಕಾಕ್ ಹೋರಾಟ 60 ರನ್ ಸಿಡಿಸಿದರೂ ಇತರೆ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ತಿಣುಕಾಡಿದರು.ಆರ್‌ಸಿಬಿ ಬುದ್ಧಿವಂತಿಕೆಯ ಬೌಲಿಂಗ್ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿತು ಮತ್ತು ಗುರಿಯನ್ನು 11 ರನ್ ಬಾಕಿವುಳಿದಿರುವಾಗಲೇ ಬೆನ್ನಟ್ಟಿತು. ಕೊಹ್ಲಿ ಅಜೇಯ 54 ರನ್ ನೆರವಿನಿಂದ ಗೆಲುವನ್ನು ತಂದಿತ್ತರು.
ಆರ್‌ಸಿಬಿ ಆರಂಭದಲ್ಲೇ ಕ್ರಿಸ್ ಗೇಲ್(1) ಮತ್ತು ಡಿ ವಿಲಿಯರ್ಸ್(6) ವಿಕೆಟ್ ಕಳೆದುಕೊಂಡಿತು. ಮಾರಿಸ್ ಮತ್ತು ಜಹೀರ್ ಖಾನ್ ಅವರ ನಿಖರ, ವೇಗದ ದಾಳಿಯನ್ನು ಕೊಹ್ಲಿ ಮತ್ತು ರಾಹುಲ್ ಎದುರಿಸಿದರು. ರಾಹುಲ್ ಅವರ 23 ಎಸೆತಗಳಲ್ಲಿ 38 ರನ್ ಕೊಹ್ಲಿಯ ಒತ್ತಡವನ್ನು ತಗ್ಗಿಸಿತು. ಮೂರನೇ ವಿಕೆಟ್‌ಗೆ 66 ರನ್ ಅವರು ಸೇರಿಸಿದರು.
ಕೊಹ್ಲಿ ಸ್ಟುವರ್ಟ್ ಬಿನ್ನಿ ಜತೆಯಾಟದೊಂದಿಗೆ ಆರ್‌ಸಿಬಿಯನ್ನು ಗೆಲುವಿನ ದಡ ಮುಟ್ಟಿಸಿದರು. ಆರ್‌ಸಿಬಿ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದ್ದು, ಮಂಗಳವಾರ ಗುಜರಾತ್ ಲಯನ್ಸ್ ವಿರುದ್ಧ ಮೊದಲ ಕ್ವಾಲಿಫೈಯರ್‌ನಲ್ಲಿ ಆಡಲಿದೆ.
ಮೂರನೇ ಸ್ಥಾನ ಪಡೆದ ಸನ್‌ರೈಸರ್ಸ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಎಲಿಮಿನೇಟರ್ ಪಂದ್ಯವನ್ನು ಬುಧವಾರ ಆಡಲಿದೆ. ಮೊದಲ ಕ್ವಾಲಿಫೈಯರ್‌ನಲ್ಲಿ ರಾಯಲ್ ಚಾಲೆಂಜರ್ಸ್ ಸೋತರೂ ಕೂಡ ಎರಡನೇ ಕ್ವಾಲಿಫೈಯರ್‌ನಲ್ಲಿ ಎಲಿಮಿನೇಟರ್‌ನಲ್ಲಿ ಗೆದ್ದ ತಂಡದೊಂದಿಗೆ ಆಡುವ ಅವಕಾಶವಿರುತ್ತದೆ.
ಸ್ಕೋರ್ ವಿವರ
ಡೆಲ್ಲಿ ಡೇರ್‌ಡೆವಿಲ್ಸ್ 8 ಕ್ಕೆ 138
ಕ್ವಿಂಟನ್ ಡಿ ಕಾಕ್ ಸಿ ಕ್ರಿಸ್ ಜೋರ್ಡಾನ್ ಬಿ ಯಜುವೇಂದ್ರ ಚಾಹಲ್ 60
ರಿಷಭ್ ಪಂತ್ ಸಿ ರಾಹುಲ್ ಬಿ ಅರವಿಂದ್ 01
ಕರುಣ್ ನಾಯರ್ ಸಿ ವಿರಾಟ್ ಕೊಹ್ಲಿ ಬಿ ಯಜುವೇಂದ್ರ ಚಾಹಲ್ 11
ಸಂಜು ಸ್ಯಾಮ್ಸನ್ ಸಿ ರಾಹುಲ್ ಬಿ ಯಜುವೇಂದ್ರ ಚಾಹಲ್ 17
ಸ್ಯಾಮ್ ಬಿಲ್ಲಿಂಗ್ಸ್ ಸಿ ಕ್ರಿಸ್ ಗೇಲ್ ಬಿ ಕ್ರಿಸ್ ಜೋರ್ಡನ್ 04