ನೈಟ್ ರೈಡರ್ಸ್ ಸೋಲಿಗೆ ಕಣ್ಣೀರಿಟ್ಟ ಚಿಯರ್‌ಲೀಡರ್‌ಗಳು

ಗುರುವಾರ, 26 ಮೇ 2016 (14:15 IST)
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ 22 ರನ್‌ಗಳಿಂದ ಸೋತ ಬಳಿಕ ಕೊಲ್ಕತಾ ನೈಟ್ ರೈಡರ್ಸ್ 2016ರ ಐಪಿಎಲ್ ಅಭಿಯಾನಕ್ಕೆ ತೆರೆಬಿತ್ತು.

ಗೌತಮ್ ಗಂಭೀರ್ ತಂಡ ಎರಡು ಬಾರಿ ಐಪಿಎಲ್ ಚಾಂಪಿಯನ್ನರಾಗಿದ್ದರೂ ಖ್ಯಾತಿಗೆ ತಕ್ಕಂತೆ ಆಡದೇ 162 ರನ್ ಚೇಸ್ ಮಾಡುವಲ್ಲಿ ವಿಫಲರಾದರು. 
 
 ತಂಡ ಎಲಿಮಿನೇಟ್ ಆದ ಗಳಿಗೆಯಲ್ಲಿ ಕೆಕೆಆರ್ ಚಿಯರ್ ಲೀಡರ್‌ಗಳು ತಮ್ಮ ತಂಡದ ಸೋಲನ್ನು ಕಂಡು ಅಳುತ್ತಿರುವ ಹೃದಯಕಲಕುವ ಚಿತ್ರವನ್ನು ಫ್ರಾಂಚೈಸಿ ಮಾಲೀಕ ಶಾ ರುಕ್ ಖಾನ್  ಪೋಸ್ಟ್ ಮಾಡಿದ್ದಾರೆ. ಸನ್ ರೈಸರ್ಸ್ ಡೇವಿಡ್ ವಾರ್ನರ್ ತಂಡವು 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಮೇ 27ರಂದು ಆಡಲಿದೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ